ಕರ್ನಾಟಕ

karnataka

ETV Bharat / state

ಅಕ್ರಮ ಮರಳುಗಾರಿಕೆ ತಡೆಯಿರಿ: ವಸಂತ ಬಂಗೇರ ಮನವಿ - illegal sand mafiya in Beltangadi

ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದ ಕೃಷಿಕರ ತೋಟಕ್ಕೆ ನುಗ್ಗಿದ ಮರಳನ್ನು ತೆಗೆಯಲು ಜಿಲ್ಲಾಡಳಿತ ಅನುಮತಿ ನೀಡಿತ್ತು. ಅದರೆ,ಕೆಲವು ವ್ಯಕ್ತಿಗಳು ರಾಜಕೀಯ ಪ್ರಭಾವ ಬಳಸಿ ನದಿಯಿಂದ ಮರಳನ್ನು ದರೋಡೆ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ವಸಂತ ಬಂಗೇರ ಆರೋಪಿಸಿದ್ದಾರೆ.

Vasanta Bagera
ವಸಂತ ಬಂಗೇರ

By

Published : May 10, 2020, 11:00 AM IST

ಬೆಳ್ತಂಗಡಿ(ದ.ಕನ್ನಡ): ತಾಲೂಕಿನ ಮುಂಡಾಜೆಯ ಮೃತ್ಯುಂಜಯ ನದಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆಯನ್ನು ಸಂಬಂಧ ಪಟ್ಟ ಇಲಾಖೆಗಳು ತಡೆಯದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಆ ಪರಿಸರದ ಗ್ರಾಮಸ್ಥರನ್ನು ಒಟ್ಟು ಸೇರಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ವಸಂತ ಬಂಗೇರ ಎಚ್ಚರಿಕೆ ನೀಡಿದ್ದಾರೆ.

ಬೆಳ್ತಂಗಡಿ ತಹಶೀಲ್ದಾರ್ ಅವರಿಗೆ ಈ ಬಗ್ಗೆ ಮನವಿ ನೀಡಿ ಬಳಿಕ ಮಾತನಾಡಿದರು. ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದ ಕೃಷಿಕರ ತೋಟಕ್ಕೆ ನುಗ್ಗಿದ ಮರಳನ್ನು ತೆಗೆಯಲು ಜಿಲ್ಲಾಡಳಿತ ಅನುಮತಿ ನೀಡಿತ್ತು. ಅದರೆ, ಕೆಲವು ವ್ಯಕ್ತಿಗಳು ರಾಜಕೀಯ ಪ್ರಭಾವ ಬಳಸಿ ನದಿಯಿಂದ ಮರಳನ್ನು ದರೋಡೆ ಮಾಡುತ್ತಿದ್ದಾರೆ. ದಿನಾ ಹತ್ತು ಹಲವು ಲಾರಿಗಳ ಮೂಲಕ ಅಕ್ರಮ ಮರಳನ್ನು ಸಾಗಿಸಲಾಗುತ್ತಿದೆ. ಅದರೆ ಇದಕ್ಕೆ ಸಂಬಂಧ ಪಟ್ಟ ಇಲಾಖೆಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವುದು ಖಂಡನೀಯ ಎಂದರು.

ವಸಂತ ಬಂಗೇರ

ಇನ್ನಾದರೂ ಇಲಾಖೆಗಳು ಈ ಅಕ್ರಮ ಮರಳುಗಾರಿಕೆಯನ್ನು ತಡೆದು ಪರಿಸರದ ಸಂಪನ್ಮೂಲವನ್ನು ಉಳಿಸಬೇಕು .ಅದೇ ರೀತಿ ರಾತ್ರಿ ಹಗಲು ಲಾರಿಗಳು ಹಿಟಾಚಿಗಳು ರಸ್ತೆಗಳಲ್ಲಿ ಸಂಚಾರಿಸುತ್ತಿರುವುದರಿಂದ ಆ ಪ್ರದೇಶದ ಜನರು ಭಯದಿಂದ ಇರುವಂತಾಗಿದೆ ಎಂದು ಹೇಳಿದರು.

ABOUT THE AUTHOR

...view details