ಕರ್ನಾಟಕ

karnataka

ETV Bharat / state

ಮೈತ್ರಿ ಸರ್ಕಾರ ಮನೆ ನಿರ್ಮಾಣ ಮಾಡದೆ ನಕಲಿ ಬಿಲ್​ಗಳನ್ನು ಮಾಡಿದೆ: ವಿ.ಸೋಮಣ್ಣ ಆರೋಪ

ಈ ಹಿಂದಿನ ಮೈತ್ರಿ ಸರ್ಕಾರ ವಸತಿ ಯೋಜನೆಯ ಪ್ರಕಾರ ಮನೆಗಳನ್ನು ನಿರ್ಮಾಣ ಮಾಡದೆ ನಕಲಿ ಬಿಲ್​ಗಳನ್ನು ಮಾಡಿದೆ. ವಸತಿ ಯೋಜನೆಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

By

Published : Jan 8, 2020, 7:59 PM IST

V. Somanna Talks on Housing Project
ಮೈತ್ರಿ ಸರ್ಕಾರ ಮನೆ ನಿರ್ಮಾಣ ಮಾಡದೆ ನಕಲಿ ಬಿಲ್​ಗಳನ್ನು ಮಾಡಿದೆ: ವಿ. ಸೋಮಣ್ಣ

ಮಂಗಳೂರು:ಈ ಹಿಂದಿನ ಸರ್ಕಾರ ವಸತಿ ಯೋಜನೆಯ ಪ್ರಕಾರ ಮನೆಗಳನ್ನು ನಿರ್ಮಿಸಿದೆ ನಕಲಿ ಬಿಲ್​ಗಳನ್ನು ಮಾಡಿದೆ. ವಸತಿ ಯೋಜನೆಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ನಗರದ ಸರ್ಕ್ಯೂಟ್ ಹೌಸ್​ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಿಗೆ 211 ಕೋಟಿ ರೂ. ಅನುದಾನವನ್ನು ಮನೆ ನಿರ್ಮಾಣಕ್ಕೆ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಜಿಲ್ಲಾಮಟ್ಟದ ಅಧಿಕಾರಿಗಳು ಸೂಚನೆ ನೀಡಿದ್ದಲ್ಲಿ ಅರ್ಧ ಕಂತುಗಳನ್ನು ಕಟ್ಟಿ ನಿಲ್ಲಿಸಲಾದ ಮನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಮೈತ್ರಿ ಸರ್ಕಾರ ಮನೆ ನಿರ್ಮಾಣ ಮಾಡದೆ ನಕಲಿ ಬಿಲ್​ಗಳನ್ನು ಮಾಡಿದೆ: ವಿ. ಸೋಮಣ್ಣ

ಬ್ಲಾಕ್ ಆಗಿರುವ, ಅರ್ಧಂಬರ್ಧ ಕಟ್ಟಲಾಗಿರುವ ಮನೆಗಳನ್ನು ಮಾರ್ಚ್ ಒಳಗಡೆ ಪೂರ್ಣಗೊಳಿಸಲಾಗುವುದು. ಇದಕ್ಕೆ ಸುಮಾರು 2 ರಿಂದ 2.50 ಸಾವಿರ ಕೋಟಿ ರೂ. ವೆಚ್ಚ ತಗುಲಬಹುದು. ಈ ಹಿಂದೆ ಒಂದು ಮನೆಗೆ 1.20 ಲಕ್ಷ ರೂ. ಕೊಡಲಾಗುತ್ತಿತ್ತು. ನಾನು ಅದನ್ನು 2.50 ಲಕ್ಷ ರೂ.ಗೆ ಏರಿಸಬೇಕೆಂದು ಸಿಎಂಗೆ ತಿಳಿಸಿದ್ದೆ. ಆದರೆ ಬಹುಶಃ 2 ಲಕ್ಷ ರೂ. ಕೊಡುತ್ತಾರೆ ಎಂದೆನಿಸುತ್ತದೆ. ಅದನ್ನು ಗ್ರಾಮಗಳಲ್ಲಿ ಜಿ.ಪಂ ಸಿಇಒ ಹಾಗೂ ನಗರಗಳಲ್ಲಿ ಜಿಲ್ಲಾಧಿಕಾರಿ, ಶಾಸಕರ ಸುಪರ್ದಿಗೆ ವಹಿಸುತ್ತೇನೆ. ಅವರು ಯಾವುದೇ ವಂಚನೆಯಾಗದಂತೆ ಈ ಹಣದಲ್ಲಿ ಮನೆ ನಿರ್ಮಾಣ ಮಾಡಿಸಬೇಕು. ಒಂದು ವರ್ಷದಲ್ಲಿ ಎರಡು ಲಕ್ಷ ಮನೆ ಕಟ್ಟುವ ಉದ್ದೇಶ ಹೊಂದಿದ್ದೇನೆ. ಇಡೀ ರಾಜ್ಯಾದ್ಯಂತ ಸುತ್ತಾಡಿ ವಸತಿ ಯೋಜನೆಗಳಿಗೆ ಹೊಸ ರೂಪ ಕೊಡುತ್ತೇನೆ ಎಂದರು.

ABOUT THE AUTHOR

...view details