ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಭೇಟಿ ನೀಡುತ್ತಿರುವ ಹಿನ್ನೆಲೆ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲ ಶಾಸಕರುಗಳಿಗೆ RTPCR ರಿಪೋರ್ಟ್ ಕಡ್ಡಾಯ ಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಶಾಸಕ ಯು.ಟಿ.ಖಾದರ್ RTPCR ಪರೀಕ್ಷೆಗೆ ಒಳಪಟ್ಟಿದ್ದರು. ವರದಿಯಲ್ಲಿ ರೋಗದ ಯಾವುದೇ ಗುಣಲಕ್ಷಣಗಳು ಇಲ್ಲದೇ ಇದ್ದರೂ ಪಾಸಿಟಿವ್ ಎಂದು ವರದಿ ಬಂದಿದ್ದು, ವೈದ್ಯರು 3 ದಿನಗಳ ಕಾಲ ಕ್ವಾರಂಟೈನ್ ಆಗಲು ತಿಳಿಸಿದ್ದಾರೆ.
ಮಾಜಿ ಸಚಿವ ಯು.ಟಿ.ಖಾದರ್ಗೆ ಕೋವಿಡ್ ಪಾಸಿಟಿವ್ - Etv Bharat Kannada
ಕಾಂಗ್ರೆಸ್ ಮಾಜಿ ಸಚಿವ ಯುಟಿ ಖಾದರ್ಗೆ ಕೋವಿಡ್ ಧೃಡ ಪಟ್ಟಿದ್ದು ಮೂರು ದಿನಗಳ ಕಾಲ ಕ್ವಾರಂಟೈನ್ ಆಗಲು ವೈದ್ಯರು ತಿಳಿಸಿದ್ದಾರೆ.
ಯು.ಟಿ.ಖಾದರ್
ಅಲ್ಲದೇ ಮೂರು ದಿನಗಳ ಕಾಲ ನಿಗದಿಪಡಿಸಿದ ಎಲ್ಲ ಕಾರ್ಯಕ್ರಮಗಳನ್ನು ರದ್ದು ಪಡಿಸಿಲಾಗಿದ್ದು, ನಿಮ್ಮೆಲ್ಲರ ಹಾರೈಕೆಗಳೊಂದಿಗೆ ಆದಷ್ಟು ಶೀಘ್ರವೇ ಗುಣಮುಖನಾಗಿ, ಮತ್ತೆ ನನ್ನ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವ ವಿಶ್ವಾಸವಿದ್ದು, ಯಾರೂ ಆತಂಕ ಪಡುವ ಆಗತ್ಯ ಇಲ್ಲ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ವ್ಯಾಕ್ಸಿನ್ ಪಡೆದು ಓಮಿಕ್ರಾನ್ ಸೋಂಕಿಗೊಳಗಾದವರಿಗೆ ಕೋವಿಡ್ನಿಂದ ನಾಲ್ಕು ಪಟ್ಟು ಹೆಚ್ಚು ರಕ್ಷಣೆ