ಕರ್ನಾಟಕ

karnataka

ETV Bharat / state

ಸರ್ಕಾರ ಯಾವುದೇ ಕಾಯ್ದೆ ಜಾರಿಗೆ ತರುವ ಮುನ್ನ ಜನರನ್ನು ವಿಶ್ವಾಸಕ್ಕೆ ತಂದು ಬಳಿಕ ಜಾರಿಗೊಳಿಸಲಿ: ಖಾದರ್​

ಸರ್ಕಾರ ಯಾವುದೇ ಕಾಯ್ದೆಯನ್ನು ತರುವ ಮುಂಚೆ ಜನರನ್ನು ವಿಶ್ವಾಸಕ್ಕೆ ತಂದು ಬಳಿಕ ಜಾರಿಗೊಳಿಸಲಿ. ಇದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

U.T Khadar
ಯು.ಟಿ.ಖಾದರ್

By

Published : Jan 16, 2020, 6:30 PM IST

ಮಂಗಳೂರು:ಎನ್ಆರ್​ಸಿ, ಸಿಎಎ, ಎನ್​ಪಿಆರ್ ಕಾಯ್ದೆಯ ಬಗ್ಗೆ ಜನತೆಗೆ ಸಾಕಷ್ಟು ಗೊಂದಲಗಳಿದ್ದು, ಇದರ ಮಾಹಿತಿ ಕಲೆ ಹಾಕಲು ಯಾವುದೇ ಅಧಿಕಾರಿಗಳನ್ನು ನೇಮಕ ಮಾಡಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಸ್ಪಷ್ಟತೆ ನೀಡಲಿ ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಯು.ಟಿ.ಖಾದರ್

ನಗರದ ಸರ್ಕ್ಯೂಟ್ ಹೌಸ್ ನಲ್ಲಿ‌ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಯಾವುದೇ ಕಾಯ್ದೆಯನ್ನು ತರುವ ಮುಂಚೆ ಜನರನ್ನು ವಿಶ್ವಾಸಕ್ಕೆ ತಂದು ಬಳಿಕ ಜಾರಿಗೊಳಿಸಲಿ. ಇದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.

ಜನಸಾಮಾನ್ಯರೂ ಕೂಡಾ ಯಾವುದೇ ಗೊಂದಲಗಳಿಗೆ ಒಳಗಾಗುವುದು ಬೇಡ‌. ಅಂಗನವಾಡಿಯವರು, ಆಶಾ ಕಾರ್ಯಕರ್ತೆಯರು ಮನೆಗೆ ಬಂದಲ್ಲಿ ವಿಷಯ ತಿಳಿದು ಅವರಿಗೆ ಸಹಕರಿಸಿ. ಯಾವುದಾದರೂ ಸಹಿ ಹಾಕುವಾಗ ಮಾತ್ರ ಸರಿಯಾಗಿ ಓದಿ, ತಿಳಿದವರಲ್ಲಿ ಮಾಹಿತಿ ಪಡೆದು ಸಹಿ ನೀಡಿ ಎಂದು ಯು.ಟಿ.ಖಾದರ್ ಹೇಳಿದರು.

19ರಂದು ಪಲ್ಸ್ ಪೋಲಿಯೊ ಇದ್ದು, ಮರುದಿನ ಆಶಾಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಸರ್ವೇಗಾಗಿ ಮನೆ ಮನೆಗೆ ಭೇಟಿ ನೀಡಲು ಬರುತ್ತಾರೆ. ಇದಕ್ಕೆಲ್ಲಾ ಜನರು ಸಹಕರಿಸಬೇಕಾಗಿದೆ. ಇತ್ತೀಚೆಗೆ ಎನ್ಆರ್​ಸಿ, ಸಿಎಎ ಕಾಯ್ದೆಯ ಬಗ್ಗೆ ಮಾಹಿತಿ ಪಡೆಯಲು ಬರುತ್ತಿದ್ದಾರೆಂದು ಜನರು ಗೊಂದಲಕ್ಕೊಳಗಾಗಿ ಯಾವುದೇ ಮಾಹಿತಿ ನೀಡುತ್ತಿಲ್ಲ. ಆದ್ದರಿಂದ ಗ್ರಾಮ ಪಂಚಾಯತ್ , ತಾಲೂಕು ಪಂಚಾಯತ್ ಸದಸ್ಯರು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಮನೆ ಮನೆಗೆ ಕರೆದುಕೊಂಡು ಹೋಗಿ ಜನರಲ್ಲಿನ ಗೊಂದಲವನ್ನು ಪರಿಹರಿಸಬೇಕು ಎಂದು ಯು.ಟಿ.ಖಾದರ್ ಹೇಳಿದರು.

ABOUT THE AUTHOR

...view details