ಕರ್ನಾಟಕ

karnataka

ETV Bharat / state

ತೋಟಗಾರಿಕೆಯಲ್ಲಿ ಯಂತ್ರೋಪಕರಣ ಬಳಕೆ ಪ್ರಾತ್ಯಕ್ಷಿಕೆ- ಮಾಹಿತಿ ಕಾರ್ಯಾಗಾರ - Use of Machine Tools in Horticulture

ಬಂಟ್ವಾಳದಲ್ಲಿ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್​​​ನಿಂದ ತೋಟಗಾರಿಕೆಯಲ್ಲಿ ಯಂತ್ರೋಪಕರಣ ಬಳಕೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಾಗಾರ ನಡೆಸಲಾಯಿತು.

ಬಂಟ್ವಾಳ
ಬಂಟ್ವಾಳ

By

Published : Jul 30, 2020, 11:48 AM IST

ಬಂಟ್ವಾಳ:ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿ ಕ್ಲಬ್ ಸಾಮಾಜಿಕ ಚಟುವಟಿಕೆ ಜೊತೆಗೆ ಕೃಷಿ ಮತ್ತು ತೋಟಗಾರಿಕೆಗೆ ಕೂಡಾ ಪ್ರೋತ್ಸಾಹ ನೀಡುತ್ತಿದೆ. ಈ ನಿಟ್ಟಿನಲ್ಲಿ ಮಾಹಿತಿ ಕಾರ್ಯಕ್ರಮ ಶ್ಲಾಘನೀಯ ಎಂದು ರೋಟರಿ ಸಹಾಯಕ ಗವರ್ನರ್ ಯತಿಕುಮಾರ್ ಸ್ವಾಮಿ ಗೌಡ ಅವರು ಹೇಳಿದರು

ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಸಿದ್ಧಕಟ್ಟೆ ಸಮೀಪದ ಹೊಕ್ಕಾಡಿಗೋಳಿ ಅಡಕೆ ತೋಟದಲ್ಲಿ ನಡೆದ ತೋಟಗಾರಿಕೆಯಲ್ಲಿ ಯಂತ್ರೋಪಕರಣ ಬಳಕೆ ಕುರಿತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಗುರು ಕಮ್ಯೂನಿಕೇಶನ್ಸ್ ಸಂಸ್ಥೆ ಮುಖ್ಯಸ್ಥ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ಅವರು ಈ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಆಂಟನಿ ಸಿಕ್ವೇರ, ಆರಂಬೋಡಿ ಗ್ರಾ.ಪಂ.ಅಧ್ಯಕ್ಷ ಪ್ರಭಾಕರ ಹುಲಿಮೇರು, ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಎಂ.ಪದ್ಮರಾಜ ಬಲ್ಲಾಳ್ ಮಾವಂತೂರು, ಕಾರ್ಯದರ್ಶಿ ಪ್ರೀತಂ ರೊಡ್ರಿಗಸ್, ಪ್ರಗತಿಪರ ಕೃಷಿಕ ರಮೇಶ್ ಪೂಜಾರಿ ಮಂಜಿಲ, ಉಪನ್ಯಾಸಕ ಡಾ.ಯೋಗೀಶ ಕೈರೋಡಿ, ಡಾ.ಸುದೀಪ್ ಕುಮಾರ್ ಜೈನ್ ಮೊದಲಾದವರು ಭಾಗಿಯಾಗಿದ್ದರು.

ABOUT THE AUTHOR

...view details