ಕರ್ನಾಟಕ

karnataka

ETV Bharat / state

ವೃದ್ಧೆಯ ಮನೆ ರಿಪೇರಿ ಮಾಡುವ ಮೂಲಕ ಲಾಕ್​ಡೌನ್​ ಅವಧಿ ಸದುಪಯೋಗ! - ಲಾಕ್ ಡೌನ್ ಅವಧಿ ಸದುಪಯೋಗ

ಸದಾ ಕಷ್ಟಗಳಿಗೆ ಸ್ಪಂದಿಸುವ ಬಂಟ್ವಾಳ ತಾಲೂಕಿನ ಯುವಕರ ತಂಡವೊಂದು ತಮ್ಮ ಊರಿನ ವೃದ್ಧೆಯೊಬ್ಬರ ಮನೆಯನ್ನು ದುರಸ್ತಿ ಮಾಡುವ ಮೂಲಕ ಲಾಕ್​ಡೌನ್ ಅವಧಿಯಲ್ಲಿ ಗಮನ ಸೆಳೆದಿದೆ.

Use of lockdown period repairing   house
ವೃದ್ಧೆಯ ಮನೆ ರಿಪೇರಿ ಮಾಡುವ ಮೂಲಕ ಲಾಕ್ ಡೌನ್ ಅವಧಿ ಸದುಪಯೋಗ..

By

Published : Apr 29, 2020, 5:41 PM IST

ಬಂಟ್ವಾಳ:ತಾಲೂಕಿನ ಯುವಕರ ತಂಡವೊಂದು ವೃದ್ಧೆಯೊಬ್ಬರ ಶಿಥಿಲಗೊಂಡಿದ್ದ ಮನೆಯನ್ನು ರಿಪೇರಿ ಮಾಡುವ ಮೂಲಕ ಲಾಕ್​ಡೌನ್ ಸಮಯವನ್ನು ಸದುಪಯೋಗ ಮಾಡಿಕೊಂಡಿದೆ.

ತಾಲೂಕಿನ ಬೋಳಂತೂರು ಎಂಬಲ್ಲಿರುವ ಗುಂಡಿಮಜಲು ತುಂಗಾ ಎಂಬುವರ ಮನೆ ಶಿಥಿಲಗೊಂಡಿದ್ದು, ಲಾಕ್​ಡೌನ್ ಇದ್ದುದರಿಂದ ಕಾರ್ಮಿಕರು, ಗಾರೆ ಕೆಲಸದವರ ಕೊರತೆಯಿಂದ ಕಂಗಾಲಾಗಿದ್ದರು. ಈ ಸಂದರ್ಭ ನೆರವಿಗೆ ಬಂದ ಸ್ಥಳೀಯ ಶೃಂಗಗಿರಿ ಶ್ರೀ ಶಾರದಾಂಬಾ ಭಜನಾ ಮಂಡಳಿಯ ಸದಸ್ಯರು ಮನೆಯನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಿದ್ದಾರೆ.

ಸುಮಾರು ಒಂದು ತಿಂಗಳು ಲಾಕ್​ಡೌನ್ ಇದ್ದ ಕಾರಣ ಈ ಅವಧಿಯಲ್ಲಿ ಸ್ಥಳೀಯರೆಲ್ಲರೂ ಒಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆ ರಿಪೇರಿಗೆ ಸಹಕರಿಸಿದ್ದಾರೆ. ಈ ಕಾರ್ಯಕ್ಕೆ ನೋಣಯ್ಯ ಜಿ.ಎನ್. ಮತ್ತು ಚೆನ್ನಪ್ಪ ಪೂಜಾರಿ ಗುಂಡಿಮಜಲು ಮುಂದಾಳತ್ವ ವಹಿಸಿದ್ದರು. ನವೀನ್ ಕುಮಾರ್ ಕೊಕ್ಕಪುಣಿ, ರಮೇಶ್ ಗುಂಡಿಮಜಲು ಹಾಗೂ ಹಲವರು ಸಹಕರಿಸಿದ್ದಾರೆ.

ABOUT THE AUTHOR

...view details