ಕರ್ನಾಟಕ

karnataka

ETV Bharat / state

ಬಾಲಕಿ ಮೇಲೆ ಅತ್ಯಾಚಾರ : ಮೈಸೂರಿನಲ್ಲಿ ಆರೋಪಿಯನ್ನ ಸೆರೆಹಿಡಿದ ಉಪ್ಪಿನಂಗಡಿ ಪೊಲೀಸರು - Uppinangady police arrested the Pocso accused in Mysore

ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಬಾಲಕಿಯ ಮೇಲೆ ಆರೋಪಿ ಮುನಾಸೀರ್ ಅತ್ಯಾಚಾರ ಎಸಗಿದ್ದ..

ಆರೋಪಿ ಮುನಾಸೀರ್
ಆರೋಪಿ ಮುನಾಸೀರ್

By

Published : Jun 27, 2022, 4:07 PM IST

ಉಪ್ಪಿನಂಗಡಿ :ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಕಾರಿನಲ್ಲಿ ಶಾಲೆಗೆ ಬಿಡುವ ಆಸೆ ತೋರಿಸಿ ಲಾಡ್ಜ್​ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮುನಾಸೀರ್‌ (21) ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ನಿವಾಸಿಯಾದ 13 ವರ್ಷದ ಬಾಲಕಿಯನ್ನು ಕಲ್ಲೇರಿಯ ಜನತಾ ಕಾಲೋನಿ ನಿವಾಸಿ ಮುನಾಸೀರ್‌ ಶಾಲೆಗೆ ಕರೆದೊಯ್ಯುವ ಭರವಸೆ ನೀಡಿ ಮೇ 30ರಂದು ಹಾಗೂ ಜೂನ್‌ 7ರಂದು ಬಲವಂತವಾಗಿ ಕಾರಿನಲ್ಲಿ ಕೂರಿಸಿದ್ದಾನೆ. ಬಳಿಕ ಉಪ್ಪಿನಂಗಡಿಯ ಲಾಡ್ಜ್​ಗೆ ಕರೆದೊಯ್ದು ದೈಹಿಕ ಸಂಪರ್ಕ ನಡೆಸಿದ್ದ.

ಅಷ್ಟೇ ಅಲ್ಲ, ಈ ಕೃತ್ಯದ ಬಗ್ಗೆ ಬಾಯ್ಬಿಟ್ಟರೆ ಪ್ರಾಣ ತೆಗೆಯೋದಾಗಿ ಬೆದರಿಕೆಯೊಡ್ಡಿದ್ದಾನೆ. ಅತ್ಯಾಚಾರ ಎಸಗಿದ ನಂತರ ಬಾಲಕಿಯನ್ನು ಉಪ್ಪಿನಂಗಡಿಯ ಬಸ್‌ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೈಸೂರಿಗೆ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಇದನ್ನೂ ಓದಿ:ಬೆಳಗಾವಿ: ಡಿಸಿ ಕಚೇರಿ ಮುಂಭಾಗ ಎಂಇಎಸ್​ ಕಾರ್ಯಕರ್ತರಿಂದ ಪ್ರತಿಭಟನೆ

For All Latest Updates

TAGGED:

ABOUT THE AUTHOR

...view details