ಕರ್ನಾಟಕ

karnataka

ETV Bharat / state

ಉಪ್ಪಿನಂಗಡಿ: ನೀರಕಟ್ಟೆ ಡ್ಯಾಮ್​ ಬಳಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ - woman's body found

ದಕ್ಷಿಣ ಕನ್ನಡ ಜಿಲ್ಲೆಯ ನೀರಕಟ್ಟೆ ಡ್ಯಾಮ್​ ಬಳಿಯ ನೇತ್ರಾವತಿ ನದಿಯಲ್ಲಿ ಸುಮಾರು 40 ರಿಂದ 50 ವರ್ಷ ವಯಸ್ಸಿನ ಮಹಿಳೆಯ ಮೃತದೇಹ ಪತ್ತೆಯಾಗಿದೆ.

ಅಪರಿಚಿತ ಮಹಿಳೆ ಮೃತದೇಹ ಪತ್ತೆ
ಅಪರಿಚಿತ ಮಹಿಳೆ ಮೃತದೇಹ ಪತ್ತೆ

By

Published : Aug 6, 2020, 11:00 PM IST

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬಜತ್ತೂರು ಗ್ರಾಮದ ನೀರಕಟ್ಟೆ ಡ್ಯಾಮ್​ ಬಳಿಯ ನೇತ್ರಾವತಿ ನದಿಯಲ್ಲಿ ಆ. 6ರಂದು ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ.

ಸುಮಾರು 40 ರಿಂದ 50 ವರ್ಷ ವಯಸ್ಸಿನ ಮಹಿಳೆಯ ಮೃತದೇಹ ಇದಾಗಿದ್ದು, ದೇಹವೂ ನದಿ ನೀರಿನಲ್ಲಿ ತೇಲಿಕೊಂಡು ಬಂದು ನೀರಕಟ್ಟೆ ವಿದ್ಯುತ್ ಸ್ಥಾವರದ ಆಣೆಕಟ್ಟಿನ ಕಸದ ರಾಶಿ ಜೊತೆ ಸೇರಿತ್ತು.

ಈ ಬಗ್ಗೆ ವಿದ್ಯುತ್ ಸ್ಥಾವರದ ಕೆಲಸಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದು, ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದು ತನಿಖೆ ಮುಂದುವರೆಸಿದ್ದಾರೆ. ಮೃತ ಮಹಿಳೆಯ ಶವ ಕೊಳೆತಿದ್ದು, ಮುಖ ಪರಿಚಯ ಸ್ಪಷ್ಟವಾಗದ ಕಾರಣ ಯಾರು ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

ABOUT THE AUTHOR

...view details