ಮಂಗಳೂರು: ಉತ್ತಮ ಪ್ರಜಾಕೀಯ ಪಕ್ಷದ ಪರ ಪ್ರಚಾರ ಮಾಡಲು ಬಂದಿದ್ದ ನಟ ಉಪೇಂದ್ರ ಬಿಸಿಲಿಗೆ ಧಣಿದಿದ್ದ ಶಾಲಾ ವಿದ್ಯಾರ್ಥಿಗಳಿಗೆ ಕಲ್ಲಂಗಡಿ ಹಣ್ಣನ್ನು ನೀಡಿದರು.
ಬಿಸಿಲಿನಿಂದ ಬಸವಳಿದ ವಿದ್ಯಾರ್ಥಿಗಳಿಗೆ ಕಲ್ಲಂಗಡಿ ನೀಡಿದ್ರು ಉಪ್ಪಿ - ಕರಪತ್ರ
ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಪರ ಮಂಗಳೂರಲ್ಲಿ ನಟ ಉಪೇಂದ್ರ ಪ್ರಚಾರ- ಬಿಸಿಲಿಗೆ ಬಸವಳಿದಿದ್ದ ಶಾಲಾ ಮಕ್ಕಳಿಗೆ ಕಲ್ಲಂಗಡಿ ವಿತರಣೆ- ಹಂಚಿ ತಿನ್ನುವಂತೆ ವಿದ್ಯಾರ್ಥಿಗಳಿಗೆ ಉಪ್ಪಿ ಸಲಹೆ
ಮತಯಾಚನೆ ಮಾಡಿದ ನಟ ಉಪೇಂದ್ರ
ಮಂಗಳೂರಿನ ಲೇಡಿ ಹಿಲ್ ಬಳಿ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಜೊತೆಗೆ ಕರಪತ್ರ ವಿತರಿಸಿ ಮತಯಾಚನೆ ಮಾಡಿದ ಸಂದರ್ಭದಲ್ಲಿ ಅಲ್ಲಿಯೇ ಹೊರಗೆ ಇದ್ದ ಶಾಲಾ ಮಕ್ಕಳಿಗೆ ಶಾಲಾ ಕಾಂಪೌಂಡ್ ದಾಟದೆ ಕಲ್ಲಂಗಡಿ ವಿತರಿಸಿದರು. ಕಲ್ಲಂಗಡಿಗಳನ್ನು ಕೊಟ್ಟು ಅದನ್ನು ಹಂಚಿ ತಿನ್ನುವಂತೆ ರಿಯಲ್ ಸ್ಟಾರ್ ಸಲಹೆ ನೀಡಿದರು.