ಪುತ್ತೂರು :ವಿದ್ಯಾರ್ಥಿಯ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಕೂರ್ನಡ್ಕ ಮಸೀದಿ ಬಳಿ ನಡೆದಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಅಝ್ಜದ್(20) ಎಂಬಾತ ಹಲ್ಲೆಗೊಳಗಾದ ಯುವಕ.
ಅಝ್ಜದ್ ಬೆಳ್ಳಾರೆ ಪಾಲ್ತಾಡು ಸಮೀಪದ ನಿವಾಸಿಯಾಗಿದ್ದು, ಪುತ್ತೂರು ಸಂತ ಫಿಲೋಮಿನ ಕಾಲೇಜಿನಲ್ಲಿ ಅಂತಿಮ ಬಿಬಿಎಂ ವ್ಯಾಸಂಗ ಮಾಡುತ್ತಿದ್ದಾರೆ. ಕೂರ್ನಡ್ಕಿನ ಮಸೀದಿಗೆ ಹೋಗುತ್ತಿದ್ದ ಈತನ ಮೇಲೆ ಕೂರ್ನಡ್ಕದ ಬದ್ರುದ್ದೀನ್, ಪರ್ಪುಂಜದ ಅಮನ್ ಮತ್ತು ಇತರರು ಸೇರಿ ಹಲ್ಲೆ ನಡೆಸಿದ್ದಾರೆ.