ಮಂಗಳೂರು: ಗುರು-ಶಿಷ್ಯರ ಸಂಬಂಧ ಭದ್ರವಾಗಿರಬೇಕಾದ್ರೆ ವಿದ್ಯಾರ್ಥಿಯಾದಾಗ ಕಲಿತ ವಿದ್ಯೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣದಿಂದ ಪಡೆದ ಜ್ಞಾನವೇ ಆಸ್ತಿ. ಜೊತೆಗೆ ಕಲಿಸಿದ ಗುರು ಮತ್ತು ಗುರುಕುಲದ ಚರಿತ್ರೆ ಮೆಲುಕು ಹಾಕುತ್ತಿರಬೇಕು ಎಂದು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಕರ ಸಂಘದ ಕುಲಪತಿ ಪ್ರೊ. ಹೆಚ್ ಡಿ ನಾರಾಯಣಸ್ವಾಮಿ ಹೇಳಿದರು.
ಜೂಮ್ ಕ್ಲೌಡ್ ಆ್ಯಪ್ ಮೂಲಕ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಕರ ಸಂಘ ನಡೆಸಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಸ್. ರಾಜೇಂದ್ರ ಪ್ರಸಾದ್ ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಇಂದಿನ ತಲೆಮಾರಿನ ಶಿಕ್ಷಕರ ಆದ್ಯತೆ ಹೇಗಿರಬೇಕೆಂದು ವಿಶ್ಲೇಷಿಸಿದರು.