ಕರ್ನಾಟಕ

karnataka

ETV Bharat / state

ವಿವಿಧ ವೇದಿಕೆಯಿಂದ 12 ನೃತ್ಯ ವಿದುಷಿಯರಿಂದ ಕೃಷ್ಣ ನೃತ್ಯೋಲ್ಲಾಸ

ಮಂಗಳೂರಿನ ಮಕ್ಕಿಮನೆ ಕಲಾವೃಂದ ಕೃಷ್ಣ ನೃತ್ಯೋಲ್ಲಾಸ ಎಂಬ ವಿಶಿಷ್ಟ ನೃತ್ಯ ಪ್ರಯೋಗವನ್ನು ಪ್ರಸ್ತುತ ಪಡಿಸಿದೆ. ಈ ನೃತ್ಯದಲ್ಲಿ 12 ನೃತ್ಯಗಾರ್ತಿಯರು ಭಾಗವಹಿಸಿದ್ದು, ತಾವಿರುವ ಸ್ಥಳಗಳಿಂದಲೇ ಡ್ಯಾನ್ಸ್​​ ಮಾಡಿ ವಿಡಿಯೋ ಮಾಡಿದ್ದಾರೆ.

Unique dance by 12 dancers
ವಿವಿಧ ವೇದಿಕೆಯಿಂದ 12 ನೃತ್ಯ ವಿದುಷಿಯರಿಂದ ಕೃಷ್ಣ ನೃತ್ಯೋಲ್ಲಾಸ

By

Published : Jun 2, 2020, 7:35 PM IST

ಮಂಗಳೂರು: ಲಾಕ್​ಡೌನ್​​ ನಡುವೆಯೂ 12 ನೃತ್ಯ ವಿದುಷಿಯರಿಂದ ಮಂಗಳೂರಿನ ಮಕ್ಕಿಮನೆ ಕಲಾವೃಂದ ಕೃಷ್ಣ ನೃತ್ಯೋಲ್ಲಾಸ ಎಂಬ ವಿಶಿಷ್ಟ ನೃತ್ಯ ಪ್ರಯೋಗವನ್ನು ಪ್ರಸ್ತುತ ಪಡಿಸಿದೆ.

ಮಕ್ಕಿಮನೆ ಕಲಾವೃಂದ ಫೇಸ್​​​​​​ಬುಕ್, ಯೂಟ್ಯೂಬ್ ಮೂಲಕ ವಿಶೇಷ ಪ್ರತಿಭಾ ಸಂಪನ್ನರಿಗೆ ವೇದಿಕೆಯನ್ನು ಒದಗಿಸಿತ್ತು. ಶಾಸ್ತ್ರೀಯ ನಾಟ್ಯದಲ್ಲಿ ವಿಶೇಷ ಸಾಧನೆ ಮಾಡಿರುವ 12 ಮಂದಿ ನೃತ್ಯ ವಿದುಷಿಯರಿಂದ ನಾಟ್ಯ ಪ್ರಯೋಗ ಏರ್ಪಡಿಸಿದೆ. ಈ ಕಾರ್ಯಕ್ರಮದಲ್ಲಿ ಚಿತ್ರಾಕ್ಷಿ ಎ.ಕೆ. ಸಸಿಹಿತ್ಲು, ಅನುಷಾ ಜೈನ್ ನೆಲ್ಯಾಡಿ, ಶ್ರಾವ್ಯಾ ಕೃಷ್ಣ ಬಜ್ಪೆ, ಚೈತನ್ಯ ಕೋಟೆ ಸುಬ್ರಹ್ಮಣ್ಯ, ಪ್ರಾರ್ಥನಾ ಜೆ.ಹೊಸಬೆಟ್ಟು ಸೇರಿದಂತೆ ಹಲವರು ಭಾಗಿಯಾಗಿದ್ದರು.

ವಿಶೇಷವೆಂದರೆ ಈ ಎಲ್ಲ ನೃತ್ಯ ವಿದುಷಿಯರೂ ಒಂದೇ ವೇದಿಕೆಯ ನೃತ್ಯ ಮಾಡದೇ ಅವರಿರುವ ಸ್ಥಳದಲ್ಲೇ ನೃತ್ಯ ಮಾಡಿದ್ದಾರೆ. ಈ ನೃತ್ಯ ಪ್ರಯೋಗವನ್ನು ವಿಡಿಯೋದಲ್ಲಿ ದಾಖಲಿಸಿ ಬಳಿಕ ಅದನ್ನು ಸಂಕಲನ ಮಾಡಲಾಗಿದೆ.

ಈ ಎಲ್ಲ ನೃತ್ಯಗಾರ್ತಿಯರು "ಸ್ವಾಗತಂ ಕೃಷ್ಣ, ಶರಣಾಗತಂ ಕೃಷ್ಣ" ಎಂಬ ಹಾಡಿಗೆ ಅವರಿರುವ ಸ್ಥಳದಲ್ಲೇ ನೃತ್ಯ ಪ್ರಯೋಗ ಮಾಡಿದ್ದಾರೆ. ಈ ಕಲಾವಿದೆಯರ ನೃತ್ಯೋಲ್ಲಾಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಲ್ಲದೇ ನೃತ್ಯ ರಸಿಕರು ಲಾಕ್ ಡೌನ್ ನಿಂದ ವೇದಿಕೆಯ ಮೂಲಕ ತಮ್ಮ ಮೆಚ್ಚುಗೆಯ ನೃತ್ಯ ವಿದುಷಿಯರ ನಾಟ್ಯವನ್ನು ನೋಡಲಾಗದಿರುವುದರಿಂದ ಯೂಟ್ಯೂಬ್ ಮೂಲಕ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details