ಬಂಟ್ವಾಳ (ದಕ್ಷಿಣ ಕನ್ನಡ):ಎಂತದ್ದೇಸಂದರ್ಭದಲ್ಲಾದರು ಜನರ ಪ್ರಾಣರಕ್ಷಣೆಗೆ ನೇತ್ರಾವತಿಗೆ ಧುಮುಕುವ ಜೀವರಕ್ಷಕರನ್ನು ಕನಿಷ್ಠ ಗುರುತಿಸಿ, ಗೌರವಿಸುವ ಕೆಲಸವನ್ನು ಮಾಡುತ್ತಿಲ್ಲ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಅಸಮಾಧಾನ ವ್ಯಕ್ತಪಡಿಸಿದೆ.
ಜೀವರಕ್ಷಕರ ಗುರುತಿಸದ ಸರ್ಕಾರ: ವೆಲ್ಫೇರ್ ಪಾರ್ಟಿ ಅಸಮಾಧಾನ - Welfare party upset
ಜನರ ಪ್ರಾಣ ಉಳಿಸಲು ನೇತ್ರಾವತಿ ನದಿಗೆ ಧುಮುಕುವ ಜೀವರಕ್ಷಕರನ್ನು ಗುರುತಿಸಿ, ಗೌರವಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ವೆಲ್ಫೇರ್ ಪಾರ್ಟಿ ಒತ್ತಾಯಿಸಿದೆ.
![ಜೀವರಕ್ಷಕರ ಗುರುತಿಸದ ಸರ್ಕಾರ: ವೆಲ್ಫೇರ್ ಪಾರ್ಟಿ ಅಸಮಾಧಾನ Sanjeevani Award](https://etvbharatimages.akamaized.net/etvbharat/prod-images/768-512-7377662-1075-7377662-1590647361451.jpg)
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಮಾತನಾಡಿ, ತಮ್ಮ ಜೀವವನ್ನು ಪಣಕ್ಕಿಟ್ಟು ಯುವಕರ ತಂಡ ಹಲವು ಜೀವಗಳನ್ನು ರಕ್ಷಿಸಿದೆ. ಆದರೆ ಸರ್ಕಾರವಾಗಲಿ, ಜಿಲ್ಲಾ-ತಾಲೂಕು ಆಡಳಿತವಾಗಲಿ ಗುರುತಿಸುವ ಕಾರ್ಯ ಮಾಡದೇ ಇರುವುದು ಬೇಸರದ ವಿಚಾರ ಎಂದರು.
ಕಲ್ಲಡ್ಕದ ಮೃತ ಯುವಕ ನಿಶಾಂತ್ ಅವರ ಮನೆಗೆ ಪಕ್ಷದ ನಿಯೋಗ ತೆರಳಿದೆ. ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ನೆರವು ನೀಡಬೇಕು. ಇಂತಹ ಆತ್ಮಹತ್ಯೆಗಳು ನಿಲ್ಲಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಮಹಮ್ಮದ್, ಝಾಹೀದ್, ತೌಸೀಫ್, ಸಮೀರ್, ಆರಿಫ್.ಪಿ.ಜೆ, ಮುಖ್ತಾರ್ ಅವರಿಗೆ ಪಕ್ಷದ ವತಿಯಿಂದ 'ಸಂಜೀವಿನಿ ಪ್ರಶಸ್ತಿ'ಯನ್ನು ನೀಡಿ ಗೌರವಿಸಲಾಯಿತು.