ಕರ್ನಾಟಕ

karnataka

ETV Bharat / state

ನೀರಿನಲ್ಲಿದ್ದಾಗಲೇ ಬೋಟ್ ದುರಸ್ತಿ: ಅಂಡರ್ ವಾಟರ್ ಗ್ಯಾರೇಜ್​​​ನಿಂದ ಯಶಸ್ವಿ ಕಾರ್ಯಾಚರಣೆ - ಅಂಡರ್ ವಾಟರ್ ಗ್ಯಾರೇಜ್ ಯಶಸ್ವಿ

ದೋಣಿ ದುರಸ್ತಿಯಾಗಬೇಕಾದಲ್ಲಿ ಸಾಮಾನ್ಯವಾಗಿ ದಡಕ್ಕೆ ತರಲು ಸಾಕಷ್ಟು ಮಾನವಶ್ರಮ ಬೇಡುವುದಲ್ಲದೇ, 70 ಸಾವಿರದಿಂದ 1 ಲಕ್ಷ ರೂ. ವೆಚ್ಚ ತಗುಲುತ್ತದೆ‌. ಆದರೆ ಸ್ಕೂಬಾ ಡೈವಿಂಗ್ ವಿಧಾನದಲ್ಲಿ ಸುಲಭವಾಗಿ ಬೋಟ್ ಅಡಿ ಭಾಗಕ್ಕೆ ತಲುಪುವ ತಂಡ 2 ಕಪ್ಪೆ ಚಿಪ್ಪಿನಂತಹ ಸಂಚಾರಕ್ಕೆ ಅಡ್ಡಿಯಾಗುವ ತ್ಯಾಜ್ಯ, ತಾಂತ್ರಿಕ ತೊಂದರೆಗಳನ್ನು 3 ಗಂಟೆಗಳ ಒಳಗೆ ಸರಿಪಡಿಸುತ್ತದೆ‌.

Underwater Garage Successful in Mangaloor
ಅಂಡರ್ ವಾಟರ್ ಗ್ಯಾರೇಜ್ ಯಶಸ್ವಿ

By

Published : Jan 11, 2021, 7:00 AM IST

ಮಂಗಳೂರು : ತಾಂತ್ರಿಕ ದೋಷಗಳು ಕಂಡು ಬರುವ ಬೋಟ್ ಗಳನ್ನು ದುರಸ್ತಿ ಮಾಡಬೇಕಾದಲ್ಲಿ ನೀರಿನಿಂದ ಮೇಲಕ್ಕೆ ತಂದು ಸರಿಪಡಿಸುವುದೇ ಇದುವರೆಗಿನ ಕ್ರಮ. ಆದರೆ ಇದೀಗ ಸ್ಕೂಬಾ ಡೈವಿಂಗ್ ಮೂಲಕ ನೀರಿಗಿಳಿದು ದುರಸ್ತಿ ಮಾಡುವಲ್ಲಿ ಬೋಟ್ ಮಾಲೀಕರೊಬ್ಬರು ಯಶಸ್ವಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಅಂಡರ್ ವಾಟರ್ ಗ್ಯಾರೇಜ್ ಶನಿವಾರದಿಂದ ಅಧಿಕೃತವಾಗಿ ಆರಂಭಗೊಂಡಿದೆ.

ನಗರದ ಬೋಟ್ ಮಾಲೀಕ ರಾಜರತ್ನ ಸನಿಲ್ ಅವರ ಅವಿರತ ಶ್ರಮದಿಂದ ಈ ಕಾರ್ಯಯೋಜನೆ ಆರಂಭಗೊಂಡಿದೆ. ಇನ್ನಿಬ್ಬರು ನುರಿತ ತಜ್ಞರೊಂದಿಗೆ ಸೇರಿ ರಾಜರತ್ನ ಸನಿಲ್ ಅವರು ತಾಂತ್ರಿಕವಾಗಿ ತೊಂದರೆಗೊಳಗಾದ ಬೋಟ್ ಒಂದನ್ನು ಸ್ಕೂಬಾ ಡೈವಿಂಗ್ ಮೂಲಕ ಏಳು ಗಂಟೆಯಲ್ಲಿ ದುರಸ್ತಿ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಓದಿ : 7 ಶಾಸಕರಿಗೆ ಸಚಿವ ಸ್ಥಾನ, ಜ.13ರಂದು ಪ್ರಮಾಣ ವಚನ: ಬಿಎಸ್​ವೈ

ದೋಣಿ ದುರಸ್ತಿಯಾಗಬೇಕಾದಲ್ಲಿ ಸಾಮಾನ್ಯವಾಗಿ ದಡಕ್ಕೆ ತರಲು ಸಾಕಷ್ಟು ಮಾನವಶ್ರಮ ಬೇಡುವುದಲ್ಲದೇ, 70 ಸಾವಿರದಿಂದ 1 ಲಕ್ಷ ರೂ. ವೆಚ್ಚ ತಗುಲುತ್ತದೆ‌. ಆದರೆ ಸ್ಕೂಬಾ ಡೈವಿಂಗ್ ವಿಧಾನದಲ್ಲಿ ಸುಲಭವಾಗಿ ಬೋಟ್ ಅಡಿ ಭಾಗಕ್ಕೆ ತಲುಪುವ ತಂಡ 2 ಕಪ್ಪೆ ಚಿಪ್ಪಿನಂತಹ ಸಂಚಾರಕ್ಕೆ ಅಡ್ಡಿಯಾಗುವ ತ್ಯಾಜ್ಯ, ತಾಂತ್ರಿಕ ತೊಂದರೆಗಳನ್ನು 3 ಗಂಟೆಗಳ ಒಳಗೆ ಸರಿಪಡಿಸುತ್ತದೆ‌. ಸ್ಕ್ಯೂಬ್ ಡೈವಿಂಗ್ ಗೆ ಬಳಸುವ ಒಂದು ಸಿಲಿಂಡರನ್ನು ಮೂರು ಗಂಟೆಗಳ ಕಾಲ ಬಳಸಲು ಸಾಧ್ಯ. ಸಾಕಷ್ಟು ಅಡೆತಡೆಗಳಿದ್ದರೂ ಅತೀ ಕಡಿಮೆ ವೆಚ್ಚ ಅಂದರೆ ಕೇವಲ 20 ಸಾವಿರ ರೂ.ನಲ್ಲಿ ಬೋಟ್ ದುರಸ್ತಿಯಾಗುತ್ತದೆ ಎಂದು ರಾಜರತ್ನ ಸನಿಲ್ ಹೇಳುತ್ತಾರೆ.

ABOUT THE AUTHOR

...view details