ಉಳ್ಳಾಲ (ದಕ್ಷಿಣ ಕನ್ನಡ) :ಇಲ್ಲಿಯವರೆಗೆ ಮನೆಗೆ ನುಗ್ಗಿ ಹಣ, ಚಿನ್ನಾಭರಣ ಅಥವಾ ಇನ್ಯಾವುದೋ ಬೆಲೆ ಬಾಳುವ ವಸ್ತುಗಳನ್ನು ಖದೀಮರು ಕಳ್ಳತನ ಮಾಡಿರುವ ಕೇಸ್ಗಳನ್ನು ನಾವು ನೀವೆಲ್ಲ ಓದಿದ್ದೇವೆ ಮತ್ತು ನೋಡಿದ್ದೇವೆ. ಆದ್ರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಪ್ರಕರಣವೊಂದು ವಿಚಿತ್ರವಾಗಿದೆ. ಇದೆಂಥ ಮಾರ್ರೆ.. ನಮ್ಮ ಒಳ ಉಡುಪನ್ನು ಹೊರಗೆ ಒಣಗಲು ಹಾಕೋದು ಕಷ್ಟ ಆಯಿತಲ್ಲ ಅಂತಾ ನೀವು ಹೇಳಬಹುದು..
ಮನೆಯಂಗಳದಲ್ಲಿ ಹಾಕಿದ್ದ ಒಳ ಉಡುಪು ಕದ್ದು ಪರಾರಿ.. ಹೌದು, ಮನೆಯೊಂದರಲ್ಲಿ ಮಹಿಳೆಯೊಬ್ಬರು ತಮ್ಮ ಮತ್ತು ತಮ್ಮ ಮಗಳ ಒಳ ಉಡುಪುಗಳನ್ನು ಸ್ವಚ್ಛವಾಗಿ ತೊಳೆದು ಮನೆಯಲ್ಲಿ ಒಣಗಲು ಹಗ್ಗದ ಮೇಲೆ ಹಾಕಿದ್ದರು. ಈ ಬಟ್ಟೆಗಳ ಮೇಲೆ ಕಾಮುಕರ ಕಣ್ಣು ಬಿದ್ದಿರುವುದು ಮನೆಯವರ ನಿದ್ದೆಗೆಡಿಸಿದ್ದು ಒಂದೆಡೆಯಾದರೆ, ಈ ಪರಿಸರದಲ್ಲಿನ ಸಾರ್ವಜನಿಕರಲ್ಲಿ ಆತಂಕ ಮನೆಮಾಡುವಂತೆ ಮಾಡಿದೆ. ಯಾಕೆಂದರೆ ಇಲ್ಲಿ ಮನೆಯ ಬಾಲ್ಕನಿ ಮತ್ತು ಟೆರೇಸ್ ಅಲ್ಲದೆ ಮನೆಯಂಗಳದಲ್ಲಿ ಒಣ ಹಾಕಿದ್ದ ಮಹಿಳೆಯರ ಬೆಲೆ ಬಾಳುವ ಸಲ್ವಾರ್, ಒಳ ಉಡುಪುಗಳನ್ನು ಖದೀಮರು ಕದ್ದೊಯ್ದಿದ್ದಾರೆ. ಜೊತೆಗೆ ಮನೆ ಬಾಗಿಲ ಲಾಕರ್ಗೆ ಕಿಡಿಗೇಡಿಗಳು ಕಾಂಡೋಮ್ ಸಿಕ್ಕಿಸಿ ವಿಕೃತಿ ಮೆರೆದ ಈ ಘಟನೆ ಸೋಮವಾರ ರಾತ್ರಿ ಉಳ್ಳಾಲ ಬೈಲಿನ ಪರಿಸರದಲ್ಲಿ ನಡೆದಿದೆ.
ಇದನ್ನೂ ಓದಿ :₹41 ಕೋಟಿ ಮೌಲ್ಯದ ಹೆರಾಯಿನ್ ಸಾಗಾಟ: ಹೈದರಾಬಾದ್ ಏರ್ಪೋರ್ಟ್ನಲ್ಲಿ ಸಿಕ್ಕಿಬಿದ್ದ ಮಹಿಳೆ