ಮಂಗಳೂರು :ಸಿಎಂ ಇಬ್ರಾಹಿಂ ಅವರಿಗೆ ವಿಧಾನ ಪರಿಷತ್ನ ವಿಪಕ್ಷ ಸಭಾನಾಯಕ ಸ್ಥಾನ ಸಿಗದೆ ಇರುವುದಕ್ಕೂ, ನನಗೆ ವಿಧಾನಸಭೆಯ ವಿಪಕ್ಷ ಉಪನಾಯಕ ಸ್ಥಾನ ಸಿಕ್ಕಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶಾಸಕ ಯು. ಟಿ ಖಾದರ್ ಹೇಳಿದರು.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಉಪನಾಯಕ ಸ್ಥಾನ ಖಾಲಿಯಿತ್ತು. ಅದನ್ನು ತುಂಬಿಸಬೇಕಿತ್ತು. ಅದಕ್ಕೆ ನನಗೆ ಅವಕಾಶ ಕೊಟ್ಟಿದ್ದಾರೆ. ಸಿ ಎಂ ಇಬ್ರಾಹಿಂ ಅವರು ಪಕ್ಷದಲ್ಲಿ ಇರುತ್ತಾರೆ. ಅವರು ಪಕ್ಷ ಬಿಡದಂತೆ ಎಐಸಿಸಿ ನಾಯಕರು ಮಾತನಾಡುತ್ತಾರೆ. ನಾನು ನಿನ್ನೆ ದೂರವಾಣಿ ಮೂಲಕ ಮಾತಾಡಿದ ವೇಳೆ ನನಗೆ ಶುಭ ಹಾರೈಸಿದ್ದಾರೆ ಎಂದರು.
ಅವರು ಪಕ್ಷ ಬಿಡುವ ಬಗ್ಗೆ ಮಾತಾಡಿಲ್ಲ. ಅಲಿಂಗ ಹೋರಾಟ, ಅಗೌ ಹೋರಾಟ ಕಾಂಗ್ರೆಸ್ ಪಕ್ಷದ ವ್ಯಾಪ್ತಿಯ ಒಳಗಡೆ ಇರುತ್ತದೆ. ಎಲ್ಲಾ ವರ್ಗದವರನ್ನು ಸೇರಿಸಿಕೊಂಡು ಹೋಗುವುದು ಕಾಂಗ್ರೆಸ್ ಸಿದ್ದಾಂತ. ಕಾಂಗ್ರೆಸ್ ಪಕ್ಷ ಯಾವುದೇ ಬೆದರಿಕೆಗೆ ಬಗ್ಗುವುದಿಲ್ಲ ಎಂದು ತಿಳಿಸಿದರು.