ಮಂಗಳೂರು: ಸಾವರ್ಕರ್ ವಿರುದ್ಧ ಕಾಂಗ್ರೆಸ್ ಪಕ್ಷಕ್ಕೆ ಇರುವುದು ಕೇವಲ ಸೈದ್ದಾಂತಿಕ ಭಿನ್ನಾಭಿಪ್ರಾಯ ಮಾತ್ರ ಎಂದು ವಿಪಕ್ಷ ಉಪನಾಯಕ ಯು ಟಿ ಖಾದರ್ ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ನಾವು ಹೇಳಿಲ್ಲ. ಅವರು ಶಿಕ್ಷೆ ಅನುಭವಿಸುತ್ತಿದ್ದ ಅಂಡಮಾನ್ ಜೈಲಿನಲ್ಲಿ 200-300 ಜನ ಸ್ವಾತಂತ್ರ್ಯ ಹೋರಾಟಗಾರರು ಇದ್ದರು. ಅವರಿಗೆ ನಾನಾ ರೀತಿಯ ಶಿಕ್ಷೆ ನೀಡಿ ಸಾಯಿಸಲಾಯಿತು. ಇದರ ಮಧ್ಯೆ
ಸಾವರ್ಕರ್ ಅವರು ಬ್ರಿಟಿಷ್ ಸರ್ಕಾರಕ್ಕೆ 10 ಕ್ಕಿಂತಲೂ ಹೆಚ್ಚು ದಯಪಾಲನಾ ಅರ್ಜಿ ಬರೆದರು. ಸಾವರ್ಕರ್ ಬರೆದ ಪತ್ರ ಪರಿಗಣಿಸಿ ಅವರನ್ನು ಬಿಟ್ಟರು. ಅವರು 1924 ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಉದಾಹರಣೆ ಇಲ್ಲ ಎಂದರು.