ಕರ್ನಾಟಕ

karnataka

ETV Bharat / state

ಮೃತ ಕೊರೊನಾ ಸೋಂಕಿತನ ಶವ ಹೂಳಲು ಗುಂಡಿ ತೆಗೆದ ಯು ಟಿ ಖಾದರ್​

ದಫನಭೂಮಿಯಲ್ಲಿ ಗುಂಡಿ ತೆಗೆಯುವ ವೇಳೆಗೆ ಆಗಮಿಸಿದ ಖಾದರ್, ಕೆಲಸಗಾರರಿಂದ ಹಾಗೆ ಪಡೆದುಕೊಂಡು ತಾವೂ ಸಹ ನೆರವಾಗಿದ್ದಾರೆ.

U T Khader
ಸಮಾಧಿ ಗುಂಡಿ ತೆಗೆದ ಯು ಟಿ ಖಾದರ್​

By

Published : Jun 23, 2020, 11:48 PM IST

ಮಂಗಳೂರು: ಕೊರೊನಾದಿಂದ ಸಾವಿಗೀಡಾದ 70 ವರ್ಷದ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಮಾಜಿ ಸಚಿವ ಯು ಟಿ ಖಾದರ್ ಹಾರೆ ಹಿಡಿದು ಸ್ವತಃ ತಾವೇ ಗುಂಡಿ ತೆಗೆದಿದ್ದಾರೆ.

ಸಮಾಧಿ ಗುಂಡಿ ತೆಗೆದ ಯು ಟಿ ಖಾದರ್​

ಕೊರೊನಾ ಸೋಂಕಿತ ವ್ಯಕ್ತಿಯ ಶವಸಂಸ್ಕಾರ ಬೋಳಾರ ಜುಮಾ ಮಸೀದಿ ಆವರಣದಲ್ಲಿರುವ ದಫನ ಭೂಮಿಯಲ್ಲಿ ನಡೆಸಲಾಯಿತು. ಈ ದಫನಭೂಮಿಯಲ್ಲಿ ಗುಂಡಿ ತೆಗೆಯುವ ವೇಳೆಗೆ ಆಗಮಿಸಿದ ಖಾದರ್, ಕೆಲಸಗಾರರಿಂದ ಹಾಗೆ ಪಡೆದುಕೊಂಡು ತಾವೂ ಸಹ ಗುಂಡಿ ತೆಗೆಯುವ ಕಾಯಕ ಮಾಡಿದರು.

ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details