ಮಂಗಳೂರು: ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡ(65) ಅವರ ಆತ್ಮಹತ್ಯೆ ವಿಚಾರವಾಗಿ ಮಾಜಿ ಸಚಿವ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.
ಧರ್ಮೇಗೌಡರನ್ನು ಸಭಾಪತಿ ಪೀಠದಲ್ಲಿ ಕೂರಿಸಿದವರೇ ಘಟನೆಗೆ ನೇರ ಹೊಣೆ: ಯು.ಟಿ ಖಾದರ್
ಧರ್ಮೇಗೌಡ ಅವರನ್ನು ಒತ್ತಾಯಪೂರ್ವಕವಾಗಿ ಸಭಾಪತಿ ಪೀಠದಲ್ಲಿ ಕೂರಿಸಿದವರೇ ಈ ಘಟನೆಗೆ ನೇರ ಹೊಣೆ ಎಂದು ಯು ಟಿ ಖಾದರ್ ಆಪಾದಿಸಿದ್ದಾರೆ.
ಮಾಜಿ ಸಚಿವ ಯು ಟಿ ಖಾದರ್
ಈ ಸುದ್ದಿಯನ್ನೂ ಓದಿ:ಎಸ್ ಎಲ್ ಧರ್ಮೇಗೌಡ ಆತ್ಮಹತ್ಯೆ ವೈಯಕ್ತಿಕ ವಿಚಾರವೋ, ರಾಜಕಾರಣವೋ ಗೊತ್ತಿಲ್ಲ : ಡಿಕೆಶಿ
ಮಂಗಳೂರಿನಲ್ಲಿ ಮಾತನಾಡಿದ ಅವರು, ಉಪಸಭಾಪತಿ ಎಸ್‌ಎಲ್ ಧರ್ಮೇಗೌಡರವರನ್ನು ಏಕಾಏಕಿ ಸಭಾಪತಿ ಪೀಠದಲ್ಲಿ ಆಡಳಿತ ಪಕ್ಷವು ಕೂರಿಸಿ ಅವರನ್ನು ಬಲಿಪಶು ಮಾಡಿದ್ದಾರೆ. ಅವರನ್ನು ಸಭಾಪತಿ ಪೀಠದಲ್ಲಿ ಕೂರಿಸಿದವರೇ ಇದಕ್ಕೆ ಹೊಣೆ. ಸಭಾಪತಿ ಬರುವುದಕ್ಕೂ ಮುನ್ನ ಅವರನ್ನು ಒತ್ತಾಯಪೂರ್ವಕವಾಗಿ ಕೂರಿಸಿದವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಜ್ಜನ, ಗೌರವಾನ್ವಿತರನ್ನು ಈ ರೀತಿ ಬಲಿಪಶು ಮಾಡಬಾರದಾಗಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ.