ಕರ್ನಾಟಕ

karnataka

ETV Bharat / state

ಕೋವಿಡ್ ಸೋಂಕಿತರ ಸಂಪರ್ಕಿತರು ಸ್ವಯಂ ಕ್ವಾರಂಟೈನ್ ಆಗಿ; ಕ್ಷೇತ್ರದ ಜನರಿಗೆ ಶಾಸಕ ಖಾದರ್ ಸಲಹೆ - U T kadhar advises people in the constituency

ಕೊರೊನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ನಿಯಮಗಳನ್ನು ರೂಪಿಸಲು ನಾಳೆ ಉಳ್ಳಾಲ ನಗರಸಭೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಯು. ಟಿ. ಖಾದರ್ ತಿಳಿಸಿದ್ದಾರೆ.

U T kadhar
ಶಾಸಕ ಯು. ಟಿ. ಖಾದರ್

By

Published : Jun 25, 2020, 9:49 PM IST

ಮಂಗಳೂರು:ಉಳ್ಳಾಲ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚು ಪತ್ತೆಯಾಗುತ್ತಿದ್ದು, ಸೋಂಕಿತರ ಸಂಪರ್ಕ ಇದ್ದವರು ಸ್ವಯಂ ಕ್ವಾರಂಟೈನ್ ಮಾಡಿಕೊಳ್ಳಿ ಎಂದು ಮಂಗಳೂರು ಕ್ಷೇತ್ರದ ಶಾಸಕ ಯು. ಟಿ. ಖಾದರ್ ಸಲಹೆ ನೀಡಿದ್ದಾರೆ.

ಉಳ್ಳಾಲ ಭಾಗದ ಹಲವೆಡೆ ಕೊರೊನಾ ಪತ್ತೆಯಾಗಿದೆ. ಉಳ್ಳಾಲ ಪೊಲೀಸ್ ಠಾಣೆ ಸೀಲ್​ಡೌನ್ ಆಗಿದೆ. ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿತರಿಂದ ಇತರರಿಗೆ ಕೊರೊನಾ ಹರಡುವುದರಿಂದ ಕೊರೊನಾ ಸೋಂಕಿತರ ಸಂಪರ್ಕ ಹೊಂದಿದವರು ಸ್ವಯಂ ಕ್ವಾರಂಟೈನ್ ಆಗಿ. ಸೋಂಕಿತರ ಸಂಪರ್ಕ ಇದ್ದರೆ ತಮಗೆ ತಿಳಿದಿರುತ್ತದೆ. ಆದುದರಿಂದ ಸ್ವಯಂ ಕ್ವಾರಂಟೈನ್ ಆಗಿ ಸೋಂಕು ಹರಡದಂತೆ ನೋಡಿಕೊಳ್ಳಿ ಎಂದು ವಿನಂತಿಸಿದ್ದಾರೆ.

ಈ ಬಗ್ಗೆ ಆರೋಗ್ಯ ಇಲಾಖೆ , ಜಿಲ್ಲಾಡಳಿತ, ಪೊಲೀಸ್ ಇಲಾಖೆ ಜೊತೆಗೆ ಚರ್ಚೆ ನಡೆಸಿದ್ದು, ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ನಿಯಮಗಳನ್ನು ರೂಪಿಸಲು ನಾಳೆ ಉಳ್ಳಾಲ ನಗರಸಭೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ABOUT THE AUTHOR

...view details