ಮಂಗಳೂರು: ಕೆಸರ್ಡೊಂಜಿ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮುದ್ರಕ್ಕೆ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲಾದ ಘಟನೆ ನಗರದ ಸಸಿಹಿತ್ಲು ಬೀಚ್ನಲ್ಲಿ ನಡೆದಿದೆ.
ಸಸಿಹಿತ್ಲು ಬೀಚ್ನಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ಸಮುದ್ರಪಾಲು - ಯುವಕರು
'ಕೆಸರ್ಡೊಂಜಿ ದಿನ' ಕೆಸರಿನೊಂದಿಗೆ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವಕರು ಬಳಿಕ ಸ್ನಾನಕ್ಕೆ ಸಸಿಹಿತ್ಲು ಬೀಚ್ಗೆ ತೆರಳಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ.
ಸ್ನಾನಕ್ಕಿಳಿದ ಇಬ್ಬರು ಯುವಕರು ಸಮುದ್ರಪಾಲು
ಬಜ್ಪೆ ನಿವಾಸಿ ಸುಜಿತ್ (32) ಹಾಗೂ ಕಾವೂರಿನ ಗುರುಪ್ರಸಾದ್ (28) ಸಮುದ್ರಪಾಲಾದ ಯುವಕರು ಎನ್ನಲಾಗಿದೆ. ಈ ಗುಂಪಿನ ಇನ್ನಿಬ್ಬರು ನೀರುಪಾಲಾಗುತ್ತಿದ್ದನ್ನು ಕಂಡ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
'ಕೆಸರ್ಡೊಂಜಿ ದಿನ' ಕೆಸರಿನೊಂದಿಗೆ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವಕರು ಬಳಿಕ ಸ್ನಾನಕ್ಕೆ ಸಸಿಹಿತ್ಲು ಬೀಚ್ಗೆ ತೆರಳಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.