ಬಂಟ್ವಾಳ: ಹೊಂಡದಲ್ಲಿದ್ದ ನೀರಿಗೆ ಸ್ನಾನಕ್ಕೆಂದು ಇಳಿದ ಇಬ್ಬರು ಮುಳುಗಿ ಮೃತಪಟ್ಟಿದ್ದಾರೆ. ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಏಲಬೆಯಲ್ಲಿ ಕಲ್ಲು ಕ್ವಾರಿಯಲ್ಲಿ ಈ ಘಟನೆ ಜರುಗಿದೆ.
ಸ್ನಾನಕ್ಕೆಂದು ಕಲ್ಲು ಕ್ವಾರಿಗಿಳಿದ ಇಬ್ಬರು ಸಾವು - ಹೊಂಡದಲ್ಲಿದ್ದ ನೀರಿಗೆ ಸ್ನಾನಕ್ಕೆಂದು ಇಳಿದು ಸಾವು
ನೀರಿಗೆ ಸ್ನಾನಕ್ಕೆಂದು ಇಳಿದ ಇಬ್ಬರು ಮುಳುಗಿ ಮೃತಪಟ್ಟಿದ್ದಾರೆ.
ಸ್ನಾನಕ್ಕೆಂದು ಕಲ್ಲು ಕೋರೆಗಿಳಿದ ಇಬ್ಬರು ಸಾವು
ಇದನ್ನೂ ಓದಿ:ಉಕ್ರೇನ್ನಿಂದ ತಾಯ್ನಾಡಿಗೆ ಮರಳಿದ ವಿಜಯಪುರದ ಸ್ನೇಹಾ ಪಾಟೀಲ್
ಸ್ಥಳೀಯ ನಿವಾಸಿ ಜಗದೀಶ್(45) ಹಾಗೂ ಅಲ್ಲಿಪಾದೆ ನಿವಾಸಿ ಹಾಗೂ ಬಂಟ್ವಾಳ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿದ್ದ ವಿದ್ಯಾರ್ಥಿ ನಿದೀಶ್(17) ಮೃತಪಟ್ಟವರು. ಬಂಟ್ವಾಳ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.