ಕರ್ನಾಟಕ

karnataka

ETV Bharat / state

ದಕ್ಷಿಣ ಕನ್ನಡದಲ್ಲಿ ಮತ್ತೆರಡು ಕೊರೊನಾ ಸೋಂಕು ಪತ್ತೆ: 52 ಕ್ಕೇರಿದ ಸೋಂಕಿತರ ಸಂಖೈ

ದ.ಕ.ಜಿಲ್ಲೆಯಲ್ಲಿ 35 ವರ್ಷದ ಮಹಿಳೆ, ಹಾಗು 31 ವರ್ಷದ ಪುರುಷ ಇಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ. ಆ ಮೂಲಕ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ.

By

Published : May 17, 2020, 2:28 PM IST

two more corona possitive cases in mangalore
ಮತ್ತೆರಡು ಕೊರೊನಾ ಸೋಂಕು ಪತ್ತೆ

ಮಂಗಳೂರು : ದ.ಕ.ಜಿಲ್ಲೆಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು ಧೃಡಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 52 ಏರಿಕೆಯಾಗಿದೆ.

35 ವರ್ಷದ ಮಹಿಳೆ, ಹಾಗು 31 ವರ್ಷದ ಪುರುಷ ಇಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ. ಯೆಯ್ಯಾಡಿ ಮೂಲದ ಮಹಿಳೆ ಮುಂಬೈನಿಂದ ಆಗಮಿಸಿದ್ದರು. ಇವರು ಪತಿ ಹಾಗೂ ಮಗುವಿನ ಜೊತೆ ಕ್ವಾರೆಂಟೈನ್​ನಲ್ಲಿದ್ದರು, ಇದೀಗ ಆಕೆಯ ಗಂಟಲು ದ್ರವ ಪರೀಕ್ಷೆಯ ವರದಿ ಬಂದಿದ್ದು, ಸೋಂಕು ದೃಢವಾಗಿದೆ.

ಜಪ್ಪಿನಮೊಗರುವಿನ 31 ವರ್ಷದ ಪುರುಷ, ಅನುಮಾನಗೊಂಡು ಸ್ವಯಂ ಗಂಟಲು ದ್ರವ ಪರೀಕ್ಷೆಗೆ ಒಳಗಾಗಿದ್ದರು. ಇದೀಗ ಅವರಿಗೂ ಸೋಂಕು ದೃಢ ಪಟ್ಟಿದೆ. ಈ ಇಬ್ಬರನ್ನೂ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖೈ 52 ಕ್ಕೆ ಏರಿಕೆಯಾಗಿದೆ. ಅದರಲ್ಲಿ 16 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ, ಐವರು ಮೃತಪಟ್ಟಿದ್ದಾರೆ. 31ಮಂದಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details