ಕರ್ನಾಟಕ

karnataka

ETV Bharat / state

ಪಬ್ ಜಿ ಆಟದ ದ್ವೇಷ ಹಿನ್ನೆಲೆ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ : ಇಬ್ಬರ ಬಂಧನ - ಮಂಗಳೂರು ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

ಅ.13ರಂದು ರಾಜೇಶ್ ಶೆಟ್ಟಿಯವರು ಕೆಲಸ ಮುಗಿಸಿ ರಾತ್ರಿ 9 : 30ರ ಸುಮಾರಿಗೆ ಮನೆಗೆ ವಾಪಸಾಗುತ್ತಿದ್ದರು. ಅವರು ಬೈಕ್‌ನಲ್ಲಿ ಮಾಲಾಡಿ ಕಾಂಕ್ರೀಟ್ ಬ್ರಿಡ್ಜ್ ಸಮೀಪದ ರಸ್ತೆಯಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಬೈಕ್‌ನಲ್ಲಿ ಹಿಂಬಾಲಿಸಿದ ಆರೋಪಿಗಳು ರಾಜೇಶ್ ಶೆಟ್ಟಿ ಬೈಕ್‌ಗೆ ಡಿಕ್ಕಿ ಹೊಡೆದು ಹರಿತವಾದ ಆಯುಧದಿಂದ ತಿವಿದು ಗಾಯಗೊಳಿಸಿದ್ದಾರೆ‌..

two-men-arrested-for-assault-on-person-in-kavoor-mangalore
ಪಬ್ ಜಿ ಆಟದ ದ್ವೇಷ ಹಿನ್ನೆಲೆ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

By

Published : Oct 22, 2021, 10:47 PM IST

ಮಂಗಳೂರು :ಪಬ್​ ಜಿ ಆಟದ ದ್ವೇಷ ಹಿನ್ನೆಲೆ ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ನಗರದ ಕಾವೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ನಗರದ ಕಾವೂರು ಶಾಂತಿನಗರ ನಿವಾಸಿ ಜೈನುಲ್ ಆಬಿದ್(24), ಪಂಜಿಮೊಗರು ನಿವಾಸಿ ಸಾಹುಲ್ ಹಮೀದ್ ಸಫ್ವಾನ್ (26) ಬಂಧಿತ ಆರೋಪಿಗಳು. ರಾಜೇಶ್ ಶೆಟ್ಟಿ ಹಲ್ಲೆಗೊಳಗಾದವರು.

ಅ.13ರಂದು ರಾಜೇಶ್ ಶೆಟ್ಟಿಯವರು ಕೆಲಸ ಮುಗಿಸಿ ರಾತ್ರಿ 9 : 30ರ ಸುಮಾರಿಗೆ ಮನೆಗೆ ವಾಪಸಾಗುತ್ತಿದ್ದರು. ಅವರು ಬೈಕ್‌ನಲ್ಲಿ ಮಾಲಾಡಿ ಕಾಂಕ್ರೀಟ್ ಬ್ರಿಡ್ಜ್ ಸಮೀಪದ ರಸ್ತೆಯಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಬೈಕ್‌ನಲ್ಲಿ ಹಿಂಬಾಲಿಸಿದ ಆರೋಪಿಗಳು ರಾಜೇಶ್ ಶೆಟ್ಟಿ ಬೈಕ್‌ಗೆ ಡಿಕ್ಕಿ ಹೊಡೆದು ಹರಿತವಾದ ಆಯುಧದಿಂದ ತಿವಿದು ಗಾಯಗೊಳಿಸಿದ್ದಾರೆ‌.

ಮಾರಣಾಂತಿಕವಾಗಿ ಹಲ್ಲೆಗೊಳಗಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details