ಮೂಡುಬಿದಿರೆ:ದ.ಕ.ಜಿಲ್ಲೆಯಲ್ಲಿ ಇಂದು ಸಂಜೆ ಗುಡುಗುಸಹಿತ ಭಾರೀ ಮಳೆ ಸುರಿದಿದ್ದು, ಈ ಸಂದರ್ಭದಲ್ಲಿ ಬಡಿದ ಸಿಡಿಲಿಗೆ ಇಬ್ಬರು ದಾರುಣವಾಗಿ ಮೃತಪಟ್ಟರು. ಈ ಘಟನೆ ಪುತ್ತಿಗೆ ಪಂಚಾಯತ್ ವ್ಯಾಪ್ತಿಯ ಕಂಚಿಬೈಲು ಎಂಬಲ್ಲಿ ಸಂಜೆ ಸುಮಾರು 5.30 ಸುಮಾರಿಗೆ ನಡೆದಿದೆ. ಕಂಚಿಬೈಲು ಪದವು ನಿವಾಸಿಗಳಾದ ಯಶವಂತ್ (25) ಮಣಿಪ್ರಸಾದ್ (25) ಸಿಡಿಲು ಮೃತಪಟ್ಟವರೆಂದು ಗುರುತಿಸಲಾಗಿದೆ.
ಇಂದು ಸಂಜೆಯಾಗುತ್ತಲೇ ದಟ್ಟ ಮೋಡ ಕವಿದು ಗುಡುಗುಸಹಿತ ಭಾರೀ ಮಳೆ ಸುರಿಯಿತು. ಈ ವೇಳೆ ಮೂಡುಬಿದಿರೆಯ ಅರ್ಬಿ ಪರಿಸರದಲ್ಲಿದ್ದ ಶೆಡ್ಗೆ ಸಿಡಿಲು ಬಡಿಯಿತು. ಕಂಚಿಬೈಲು ಯೆರಗುಂಡಿ ಫಾಲ್ಸ್‌ಗೆ ಹೋಗಿದ್ದ ಯಶವಂತ್, ಮಣಿಪ್ರಸಾದ್ ಸಿಡಿಲು ಬಡಿದು ಸಾವಿಗೀಡಾದರು.