ಕರ್ನಾಟಕ

karnataka

ETV Bharat / state

ಎರಡು ತಲೆ ಹಾವು ಕಳ್ಳ ಸಾಗಣೆ ಯತ್ನ: ಐವರ ಬಂಧನ, ಹಾವು, 2 ಕಾರು, ನೋಟ್ ಕೌಂಟಿಂಗ್ ಮಷಿನ್ ವಶ - ಎರಡು ತಲೆ ಹಾವು ಅಕ್ರಮ ಸಾಗಾಟ

ಕಾಸರಗೋಡಿನಿಂದ ಸುಳ್ಯಕ್ಕೆ ಸ್ವಿಫ್ಟ್ ಕಾರಿನಲ್ಲಿ ಸುಮಾರು 8 ಕೆ.ಜಿ.ತೂಕದ ಇಡ್ತಲೆ ಹಾವನ್ನು ಸಾಗಿಸುತ್ತಿದ್ದಾಗ ಮುರೂರು ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿರುವುದನ್ನು ಗಮನಿಸಿದ್ದಾರೆ‌. ತಕ್ಷಣ ತಮ್ಮ ಕಾರನ್ನು ಅರಣ್ಯ ಪ್ರದೇಶದೊಳಗೆ ಚಲಾಯಿಸಿದ್ದಾರೆ. ಇದನ್ನು ಗಮನಿಸಿದ ಪೋಲೀಸರ ತಂಡ ಅವರನ್ನು ಬೆನ್ನಟ್ಟಿ ಪರಿಶೀಲಿಸಿದ ವೇಳೆ ಹಾವನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

Accuse arrest
Accuse arrest

By

Published : May 4, 2021, 7:13 PM IST

ಸುಳ್ಯ: ಕೇರಳದಿಂದ ಸುಳ್ಯ ಕಡೆಗೆ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಅಳಿವಿನಂಚಿನಲ್ಲಿರುವ ಇಡ್ತಲೆ(ಎರಡು ತಲೆ) ಹಾವು ಮಾರಾಟ ಮಾಡಲು ಸಾಗಣೆ ಮಾಡುತ್ತಿದ್ದ ಐವರು ಕೇರಳ ಮೂಲದವರನ್ನು ಅರಣ್ಯ ಸಂಚಾರಿ ಪೊಲೀಸರು ಬಂಧಿಸಿ ಹಾವನ್ನು ವಶಕ್ಕೆ ಪಡೆದಿದ್ದಾರೆ.

ಕಾಸರಗೋಡು ಜಿಲ್ಲೆಯ ಪಯ್ಯನ್ನೂರು ನಿವಾಸಿ ಜಬ್ಬರ್, ಅಶ್ರಫ್, ರಾಜೇಶ್, ರಮೇಶನ್, ಬಿಪಿನ್ ಬಂದಿತ ಆರೋಪಿಗಳು ಎಂದು ತಿಳಿದು ಬಂದಿದೆ. ಇವರು ಕೇರಳದ ಕಾಸರಗೋಡಿನಿಂದ ಸುಳ್ಯಕ್ಕೆ ಸ್ವಿಫ್ಟ್ ಕಾರಿನಲ್ಲಿ ಸುಮಾರು 8 ಕೆ.ಜಿ.ತೂಕದ ಇಡ್ತಲೆ ಹಾವನ್ನು ಸಾಗಿಸುತ್ತಿದ್ದಾಗ ಮುರೂರು ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿರುವುದನ್ನು ಗಮನಿಸಿದ್ದಾರೆ‌. ತಕ್ಷಣ ತಮ್ಮ ಕಾರನ್ನು ಅರಣ್ಯ ಪ್ರದೇಶದೊಳಗೆ ಚಲಾಯಿಸಿದ್ದಾರೆ. ಇದನ್ನು ಗಮನಿಸಿದ ಪೊಲೀಸರ ತಂಡ ಅವರನ್ನು ಬೆನ್ನಟ್ಟಿ ಪರಿಶೀಲಿಸಿದ ವೇಳೆ ಹಾವನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಕಾರಿನಲ್ಲಿದ್ದ ನೋಟ್ ಕೌಂಟಿಂಗ್ ಮಷಿನ್ ಹಾಗೂ 2 ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ತಿಳಿದು ಬಂದಿದೆ. ಪುತ್ತೂರು ಅರಣ್ಯ ಸಂಚಾರಿ ದಳದ ಪೊಲೀಸ್ ಅಧಿಕಾರಿಗಳಾದ ಎಸ್.ಐ.ಜಾನಕಿ, ಸುಂದರ ಶೆಟ್ಟಿ, ವಿಜಯ ಸುವರ್ಣ, ಉದಯ್ ,ಸಂತೋಷ್, ಸರಸ್ವತಿಯವರು ಕಾರ್ಯಾಚರಣೆ ತಂಡದಲ್ಲಿದ್ದರು.

ABOUT THE AUTHOR

...view details