ಮಂಗಳೂರು:ಸುರತ್ಕಲ್ನ ಎನ್ಐಟಿಕೆ ಟೋಲ್ ಗೇಟ್ ತೆರವಿಗಾಗಿ ಅ. 18 ರಂದು ಹೋರಾಟ ಮಾಡಿದ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.
ಘಟನೆಗೆ ಸಂಬಂಧಿಸಿದಂತೆ ಎನ್ಎಂಪಿಆರ್ಸಿಎಲ್ನ ಪ್ರಾಜೆಕ್ಟ್ ಡೈರೆಕ್ಟರ್ ಆಗಿರುವ ಲಿಂಗೇಗೌಡ ಅವರು ಒಂದು ದೂರನ್ನು, ಎನ್.ಎಂ.ಪಿ. ರೋಡ್ ಕಂಪನಿ ಲಿಮಿಟೆಡ್ ನ ಫೀಸ್ ಕಲೆಕ್ಷನ್ ಏಜೆನ್ಸಿಯ ನೂರ್ ಮುಹಮ್ಮದ್ ಸಂಸ್ಥೆಯ ಎನ್ಐಟಿಆರ್ ಟೋಲ್ ವಿಭಾಗದ ಮ್ಯಾನೇಜರ್ ಶಸುಕುಮಾರ್ ಮತ್ತೊಂದು ದೂರು ನೀಡಿದ್ದಾರೆ.
ಟೋಲ್ ಗೇಟ್ ವಿರೋಧಿ ಹೋರಾಟಗಾರರೊಂದಿಗೆ ಎಸಿಪಿ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದ್ದಾಗ ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ, ಅ.18ರಂದು ಸುಮಾರು 25 ರಿಂದ 30 ಮಂದಿಯ ಕೂಟ ಟೋಲ್ ಗೇಟ್ಗೆ ಮುತ್ತಿಗೆ ಹಾಕಿ ಘೋಷಣೆಗಳನ್ನು ಕೂಗುವ ಜೊತೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನಗಳನ್ನು ತಡೆದು ಸಾರ್ವಜನಿಕರಿಗೆ ತೊಂದರೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.