ಕರ್ನಾಟಕ

karnataka

ETV Bharat / state

ಎರಡು ಪ್ರತ್ಯೇಕ ಪ್ರಕರಣ: ಬೈಕ್ ಸ್ಕಿಡ್ ಆಗಿ ಇಬ್ಬರು ಸಾವು - ರಸ್ತೆ ಅಪಘಾತ ನ್ಯೂಸ್

ದ್ವಿಚಕ್ರ ವಾಹನ ಸ್ಕಿಡ್ ಆಗಿ ಇಬ್ಬರು ಸಾವನ್ನಪ್ಪಿದ ಎರಡು ಪ್ರತ್ಯೇಕ ಪ್ರಕರಣಗಳು ಬಂಟ್ವಾಳ ಟ್ರಾಫಿಕ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Police
Police

By

Published : Aug 10, 2020, 9:40 AM IST

ಬಂಟ್ವಾಳ: ದ್ವಿಚಕ್ರ ವಾಹನ ಸ್ಕಿಡ್ ಆಗಿ ಸವಾರನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನಂದಾವರದಲ್ಲಿ ನಡೆದಿದೆ.

ನರಿಕೊಂಬು ನಿವಾಸಿ ಶಿವಾನಂದ (45) ಮೃತಪಟ್ಟ ದುರ್ದೈವಿ. ಶಿವಾನಂದ ಅವರು ನಂದಾವರ ದೇವಸ್ಥಾನದಲ್ಲಿ ಸಂಬಂಧಿಕರ ಉತ್ತರಕ್ರಿಯೆ ಕಾರ್ಯಕ್ರಮ ಮುಗಿಸಿ ಮನೆಗೆ ತೆರಳುವ ವೇಳೆ ನಂದಾವರದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಈ ಬಗ್ಗೆ ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಎಸ್.ಐ.ರಾಮನಾಯ್ಕ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಹಾಗೆಯೇ ಬಂಟ್ವಾಳದ ಬಿ.ಆರ್.ಎಂ.ಪಿ. ಶಾಲಾ ತಿರುವಿನಲ್ಲಿ ಸಹ ಬೈಕ್ ಸ್ಕಿಡ್ ಆಗಿ ಬಿದ್ದು, ಬೈಪಾಸ್ ಪೆಟ್ರೋಲ್ ಪಂಪ್ ಸಮೀಪದ ನಿವಾಸಿ ಪುಂಡಲೀಕ ಶೆಣೈ (55) ಸಾವನ್ನಪ್ಪಿದ್ದಾರೆ. ಮೂರು ದಿನಗಳ ಹಿಂದೆ ಈ ಅಪಘಾತ ನಡೆದಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಬಂಟ್ವಾಳ ಟ್ರಾಫಿಕ್ ಠಾಣಾ ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details