ಕರ್ನಾಟಕ

karnataka

ETV Bharat / state

ಬೆಳ್ತಂಗಡಿ: ವಿಷಪೂರಿತ ಅಣಬೆ ಸೇವಿಸಿ ತಂದೆ–ಮಗ ಸಾವು - ವಿಷಪೂರಿತ ಅಣಬೆ ಸೇವಿಸಿ ಇಬ್ಬರು ಸಾವು

ವಿಷಪೂರಿತ ಅಣಬೆ ಸೇವಿಸಿ ಇಬ್ಬರು ಸಾವು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದಲ್ಲಿ ಘಟನೆ.

Two died after consuming poisonous mushrooms
ವಿಷಕಾರಿ ಅಣಬೆ ಸೇವಿಸಿ ತಂದೆ–ಮಗ ಸಾವು

By

Published : Nov 22, 2022, 2:14 PM IST

Updated : Nov 22, 2022, 2:36 PM IST

ಬೆಳ್ತಂಗಡಿ:ವಿಷ ಪದಾರ್ಥ ಸೇವಿಸಿದ ಪರಿಣಾಮ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದಲ್ಲಿ ನಡೆದಿದೆ. ಮೀಯಾರುಪಾದೆ ಕೇರಿಮಾರು ನಿವಾಸಿಗಳಾದ ಗುರುವ ಮೇರ (80) ಹಾಗೂ ಇವರ ಪುತ್ರ ಓಡಿಯಪ್ಪ(41) ಮೃತರು.

ತೀರಾ ಬಡವನಾದ ಗುರುವ ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯಲ್ಲಿ ವಾಸ್ತವ್ಯ ಇದ್ದರು. ಇಂದು(ಮಂಗಳವಾರ) ಮುಂಜಾನೆ ಗುರುವ ಮತ್ತು ಮಗ ಓಡಿಯ ಮೃತದೇಹ ಮನೆಯ ಅಂಗಳದಲ್ಲಿದ್ದವು. ಇದನ್ನು ಕಂಡು ಸ್ಥಳೀಯರು ಆತಂಕಕ್ಕೀಡಾಗಿದ್ದರು. ಸೋಮವಾರ ರಾತ್ರಿ ಕಾಡಿನ ವಿಷಪೂರಿತ ಅಣಬೆಯನ್ನು ಅಡುಗೆ ಮಾಡಿ ಸೇವಿಸಿರುವುದರಿಂದ ಅವರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಮತ್ತೊಬ್ಬ ಮಗ ಮನೆಯಲ್ಲಿ ಇಲ್ಲವಾದುದರಿಂದ ಆತ ಸಾವಿನಿಂದ ಪಾರಾಗಿದ್ದಾನೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಗ್ರಾ.ಪಂ ಅಧ್ಯಕ್ಷ ಯಶವಂತಗೌಡ

ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶವಗಳನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಇದನ್ನೂ ಓದಿ:ಕ್ರೈಂ ಬ್ರಾಂಚ್ ಪೊಲೀಸ್‌ ಇನ್ಸ್​ಪೆಕ್ಟರ್ ಮೇಲೆ ಹಲ್ಲೆ, ಕಾರಿನೊಂದಿಗೆ ಪರಾರಿ

Last Updated : Nov 22, 2022, 2:36 PM IST

ABOUT THE AUTHOR

...view details