ಕರ್ನಾಟಕ

karnataka

ETV Bharat / state

ಸುಳ್ಯದಲ್ಲಿ 100 ಕೆ.ಜಿ ಕಡವೆ ಮಾಂಸದೊಂದಿಗೆ ಆರೋಪಿಗಳ ಬಂಧನ - Etv Bharat Kannada

ಅರಣ್ಯದಲ್ಲಿ ಅಕ್ರಮವಾಗಿ ಕಡವೆ ಬೇಟೆಯಾಡಿ ಮಾಂಸ ಸಂಗ್ರಹಿಸಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.

kn_dk_01_forester
ಕಡೆವೆ ಬೇಟೆಯಾಡಿದ್ದ ಇಬ್ಬರ ಬಂಧನ

By

Published : Oct 19, 2022, 7:00 AM IST

ಸುಳ್ಯ(ದಕ್ಷಿಣ ಕನ್ನಡ): ಅಕ್ರಮವಾಗಿ ಅರಣ್ಯದೊಳಗೆ ನುಗ್ಗಿ ಕಡವೆಯನ್ನು ಬೇಟೆಯಾಡಿದ ಇಬ್ಬರನ್ನು ಮಾಂಸ ಸಹಿತ ಸಂಪಾಜೆ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಸುಳ್ಯ ತಾಲೂಕು ದಬ್ಬಡ್ಕ ಗ್ರಾಮ ನಿವಾಸಿಗಳಾದ ಕೃಷ್ಣಪ್ಪ, ಪುರುಷೋತ್ತಮ ಕೆ.ಎಸ್ ಬಂಧಿತ ಆರೋಪಿಗಳು. ಬಂಧಿತರಿಂದ 100 ಕೆ.ಜಿ ಕಡವೆ ಮಾಂಸ, ಕೃತ್ಯಕ್ಕೆ ಬಳಸಿದ ಕತ್ತಿ, ಟಾರ್ಪಲ್ ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ದ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ ಹಾಗೂ ಸಂಪಾಜೆ ವಲಯ ಅರಣ್ಯಾಧಿಕಾರಿ ಮಧುಸೂದನ್ ಎಂ.ಕೆ. ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ್ದ ವೇಳೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.

ಇದನ್ನೂ ಓದಿ:ಜಿಂಕೆ ಮಾಂಸ ಪಾಲು ಮಾಡುತ್ತಿದ್ದ ಐವರು ಬೇಟೆಗಾರರು ಜೈಲುಪಾಲು

ABOUT THE AUTHOR

...view details