ಕರ್ನಾಟಕ

karnataka

ETV Bharat / state

ಸಮುದ್ರದಲ್ಲಿ ದೋಣಿ ಮಗುಚಿ ನಾಪತ್ತೆಯಾದವರಲ್ಲಿ ಇಬ್ಬರ ಮೃತದೇಹ ಪತ್ತೆ - mangalore latest news

ಶ್ರೀ ರಕ್ಷಾ ಹೆಸರಿನ ಪರ್ಷಿಯನ್ ಬೋಟ್ ನಿನ್ನೆ ಮೀನುಗಾರಿಕೆಗೆ ತೆರಳಿ ಮೀನು ತುಂಬಿಸಿಕೊಂಡು ವಾಪಸ್​ ಬರುವಾಗ ಕಲ್ಲಿಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿತ್ತು..

two-dead-body-found-in-sea
ಇಬ್ಬರ ಮೃತದೇಹ ಪತ್ತೆ

By

Published : Dec 1, 2020, 3:12 PM IST

Updated : Dec 1, 2020, 3:21 PM IST

ಮಂಗಳೂರು: ಇಲ್ಲಿನ ಧಕ್ಕೆ ಅಳಿವೆ ಬಾಗಿಲಿನಲ್ಲಿ ಪರ್ಷಿಯನ್ ಬೋಟ್ ಮುಳುಗಡೆಯಾಗಿ ನಾಪತ್ತೆಯಾದ ಆರು ಮೀನುಗಾರರ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿವೆ.

ಮಂಗಳೂರಿನ ಬೊಕ್ಕಪಟ್ಣದ ಪಾಂಡುರಂಗ ಸುವರ್ಣ, ಪ್ರೀತಂ ಎಂಬುವರ ಮೃತದೇಹ ಪತ್ತೆಯಾಗಿದ್ದು, ಉಳಿದ ನಾಲ್ವರಿಗಾಗಿ ಶೋಧ ನಡೆಯುತ್ತಿದೆ. ಘಟನೆ ನಡೆದ ಸುತ್ತಲ ಪ್ರದೇಶದಲ್ಲಿ ಮುಳುಗು ತಜ್ಞರು, ಸ್ಥಳೀಯ ಮೀನುಗಾರರು ಮತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದೆ. ಈಗ ಇಬ್ಬರ ಮೃತದೇಹವನ್ನು ಮುಳುಗು ತಜ್ಞರು ಮೇಲಕ್ಕೆತ್ತಿದ್ದಾರೆ.

ಹೆಚ್ಚಿನ ಓದಿಗಾಗಿ:ಮಂಗಳೂರು: ಪರ್ಷಿಯನ್‌ ಬೋಟ್ ಮುಳುಗಡೆ, 6 ಮೀನುಗಾರರು ನಾಪತ್ತೆ

ಶ್ರೀ ರಕ್ಷಾ ಹೆಸರಿನ ಪರ್ಷಿಯನ್ ಬೋಟ್ ನಿನ್ನೆ ಮೀನುಗಾರಿಕೆಗೆ ತೆರಳಿ ಮೀನು ತುಂಬಿಸಿಕೊಂಡು ವಾಪಸ್​ ಬರುವಾಗ ಕಲ್ಲಿಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿತ್ತು. ಬೋಟ್​ನಲ್ಲಿದ್ದ 16 ಮಂದಿಯನ್ನು ಸ್ಥಳೀಯ ಬೋಟ್ ಸಿಬ್ಬಂದಿ ರಕ್ಷಿಸಿದ್ದರು. ಆರು ಮಂದಿ ನಾಪತ್ತೆಯಾಗಿದ್ದರು. ಇದರಲ್ಲಿ ಇಬ್ಬರ ಮೃತದೇಹ ಸಿಕ್ಕಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

Last Updated : Dec 1, 2020, 3:21 PM IST

ABOUT THE AUTHOR

...view details