ಕರ್ನಾಟಕ

karnataka

ETV Bharat / state

ರೈಲಿನ ಶೌಚಾಲಯದಲ್ಲಿ ವ್ಯಕ್ತಿ ಆತ್ಮಹತ್ಯೆ.. ರೈಲ್ವೆ ಹಳಿ ಮೇಲೆ ಅಪರಿಚಿತ ಶವ ಪತ್ತೆ - etv bharat kannada

ರೈಲಿನ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ವ್ಯಕ್ತಿಯ ಕೊಳೆತ ಶವ ಪತ್ತೆಯಾಗಿದೆ. ಇನ್ನೊಂದು ಪ್ರಕರಣದಲ್ಲಿ ರೈಲ್ವೆ ಹಳಿಯ ಮೇಲೆ ಮೃತದೇಹ ಪತ್ತೆಯಾಗಿದೆ.

two-dead-bodies-found-in-mangaluru
ರೈಲಿನ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ- ರೈಲ್ವೆ ಹಳಿ ಮೇಲೆ ಅಪರಿಚಿತ ಶವ ಪತ್ತೆ

By

Published : Mar 21, 2023, 4:26 PM IST

ಮಂಗಳೂರು:ಮಂಗಳೂರಿನಲ್ಲಿ ಇಬ್ಬರು ವ್ಯಕ್ತಿಗಳ ಮೃತದೇಹಗಳು ಪತ್ತೆಯಾಗಿದ್ದು ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಎರಡು ಪ್ರಕರಣಗಳಿಂದ ಜನರ ಆತಂಕಕ್ಕೆ ಕಾರಣವಾಗಿದೆ. ಮಂಗಳೂರು ರೈಲಿನ ಶೌಚಾಲಯದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇನ್ನೊಂದು ಪ್ರಕರಣದಲ್ಲಿ ರೈಲ್ವೆ ಹಳಿಯ ಮೇಲೆ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಈ ಎರಡು ಘಟನೆಗಳ ಬಗ್ಗೆ ರೈಲ್ವೆ ಇಲಾಖೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಾರ್ಚ್​ 19 ರಂದು ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ರೈಲು ಗಾಡಿಯ ಬೋಗಿಯ ಶೌಚಾಲಯದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಬಗ್ಗೆ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್. ನಂ- 08/2023 ಕಲಂ 174 ಸಿ.ಆರ್.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಶವವನ್ನು ನಗರದ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಅಪರಿಚಿತ ವ್ಯಕ್ತಿಯ ಶವ ಹಳಿಯಲ್ಲಿ ಪತ್ತೆ: ಮಾರ್ಚ್ 19 ರಂದು ಬಂದರು ಗೂಡ್ಸ್‌ ಯಾರ್ಡ್​ನ ರೈಲ್ವೆ ಹಳಿಯ ಮೇಲೆ ಒಂದು ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ಈ ಬಗ್ಗೆ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಮೃತ ದೇಹದ ಗುರುತು ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸ್ಕೂಟರ್​ಗೆ ಟಿಪ್ಪರ್​ ಡಿಕ್ಕಿ ಇಬ್ಬರು ಸಾವು: ಮಂಗಳೂರು ನಗರದ ನಂತೂರಿನಲ್ಲಿ ಸ್ಕೂಟರ್​ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿರುವ ಘಟನೆ ಮಾರ್ಚ್​ 18 ರಂದು ಮಧ್ಯಾಹ್ನ ಸಂಭವಿಸಿತ್ತು. ನಗರದ ಸುಲ್ತಾನ್ ಬತ್ತೇರಿಯ ನಿವಾಸಿ ಸ್ಯಾಮುಯೆಲ್ ಜೇಸುದಾಸ್ (66) ಮತ್ತು ಅವರ ಸೊಸೆಯ ದೊಡ್ಡಮ್ಮನ ಮಗಳು ಭೂಮಿಕಾ (17) ಮೃತಪಟ್ಟವರು. ಪಂಪ್​ವೆಲ್ ಕಡೆಯಿಂದ ನಂತೂರ್​ ಕಡೆಗೆ ಅತಿ ವೇಗದಿಂದ ಬರುತ್ತಿದ್ದ ಟಿಪ್ಪರ್ ಲಾರಿ ಸ್ಕೂಟರ್​​ಗೆ ಡಿಕ್ಕಿ ಹೊಡೆದಿದೆ. ಲಾರಿಯೂ ಸ್ಕೂಟರ್ ಅನ್ನು ಅನತಿ ದೂರದವರೆಗೆ ಎಳೆದೊಯ್ದಿದೆ. ಇದೇ ವೇಳೆ ಇಬ್ಬರ ಮೇಲೆ ಲಾರಿ ಹರಿದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದರು.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಆತ್ಮಹತ್ಯೆ: ಉಳ್ಳಾಲದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಚ್ಚಿಲಕೋಡಿ ಎಂಬಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವ ಕಳೆದ ಭಾನುವಾರದಂದು ಪತ್ನಿಯ ಸಂಬಂಧಿಕರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ವಿಟ್ಲ ಕನ್ಯಾನ ನಿವಾಸಿ ಬಾಬು ಶೆಟ್ಟಿಗಾರ್ ಎಂಬವರ ಪುತ್ರ ಹರೀಶ್ (33) ಆತ್ಮಹತ್ಯೆ ಮಾಡಿಕೊಂಡವರು. ಮೃತ ಹರೀಶ್ ಕಳೆದ 10 ವರ್ಷಗಳಿಂದ ಮುಡಿಪುವಿನಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಗಾರ್ಡ್​ (ಕಾವಲುಗಾರ) ಆಗಿ ಕೆಲಸ ನಿರ್ವಹಿಸುತ್ತಿದ್ದರು. ವರ್ಷದ ಹಿಂದಷ್ಟೇ ಹರೀಶ್ ಸಿದ್ದಕಟ್ಟೆ-ಸಂಗಬೆಟ್ಟು ಎಂಬಲ್ಲಿಯ ಯುವತಿಯನ್ನು ವಿವಾಹವಾಗಿದ್ದರು.

ಇದನ್ನೂ ಓದಿ:ಫುಟ್ಬಾಲ್, ಕ್ರಿಕೆಟ್, ದೇವರ ಸೇವೆ ಎಲ್ಲದಕ್ಕೂ ಸೈ ಅಂತಾಳೆ ಮಹಾಲಕ್ಷ್ಮಿ: ಪೈಪ್ ಹಿಡಿದು ನಿಂತರೆ ಅರ್ಧ ಗಂಟೆ ಸ್ನಾನ!

ABOUT THE AUTHOR

...view details