ಕರ್ನಾಟಕ

karnataka

ETV Bharat / state

1 ದಿನದ ಅಂತರದಲ್ಲಿ ಎರಡೆರಡು ರಿಪೋರ್ಟ್​​: ಕ್ವಾರೆಂಟೈನ್​ ವಿಚಾರದಲ್ಲಿ ಗೊಂದಲ

ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ವ್ಯಕ್ತಿಗೆ ಒಂದು ದಿನದ ಅಂತರದಲ್ಲಿ ಎರಡು ಬಾರಿ ಕೊರೊನಾ ವರದಿ ಬಂದಿದ್ದು, ಒಂದರಲ್ಲಿ ಪಾಸಿಟಿವ್​, ಮತ್ತೊಂದರಲ್ಲಿ ನೆಗೆಟಿವ್​ ಎಂದು ಬಂದಿದೆ. ಈ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯಬೇಕೋ ಬೇಡವೋ ಎಂಬ ಗೊಂದಲ ಉಂಟಾಗಿದೆ. ​

ಗೊಂದಲದಲ್ಲಿರುವ ಸುಳ್ಯದ ವ್ಯಕ್ತಿ
ಗೊಂದಲದಲ್ಲಿರುವ ಸುಳ್ಯದ ವ್ಯಕ್ತಿ

By

Published : Jul 29, 2020, 10:36 AM IST

ಸುಳ್ಯ (ದಕ್ಷಿಣ ಕನ್ನಡ): ಇಲ್ಲಿನ ಉದ್ಯಮಿಯೊಬ್ಬರಿಗೆ ಒಂದು ದಿನದ ಅಂತರದಲ್ಲಿ ಎರಡು ಬಾರಿ ಕೊರೊನಾ ವರದಿ ಬಂದಿದ್ದು, ಒಂದರಲ್ಲಿ ಪಾಸಿಟಿವ್​, ಮತ್ತೊಂದರಲ್ಲಿ ನೆಗೆಟಿವ್​ ಎಂದು ಬಂದಿದೆ. ಈ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯಬೇಕೋ ಬೇಡವೋ ಎಂಬ ಗೊಂದಲ ಉಂಟಾಗಿದೆ. ​

ಹೃದಯ ಸಂಬಂಧಿ ಖಾಯಿಲೆ ಹೊಂದಿರುವ ಇವರು ಸುಳ್ಯದ ವೈದ್ಯರ ಬಳಿ ತೆರಳಿ ಟೆಸ್ಟ್​ ಮಾಡಿಸಿದ್ದಾರೆ. ಅಲ್ಲಿಂದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಹೋಗಿ ಕೊರೊನಾ ತಪಾಸಣೆ ಮಾಡಿಸಿದ್ದಾರೆ. ಆಗ ಕೊರೊನಾ ಇರುವುದು ದೃಢವಾಗಿತ್ತು.

ಗೊಂದಲದಲ್ಲಿರುವ ಸುಳ್ಯದ ವ್ಯಕ್ತಿ

ಮರುದಿನ ವೈದ್ಯರ ಸಲಹೆಯಂತೆ ಪುನಃ ಗಂಟಲ ದ್ರವ ತೆಗೆದು ಖಾಸಗಿ ಆಸ್ಪತ್ರೆಯೊಂದರಲ್ಲಿ ಪರೀಕ್ಷೆಗೊಳಪಡಿಸಿದಾಗ ಆ ವರದಿಯಲ್ಲಿ ನೆಗೆಟಿವ್‌ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಆದರೆ, ಒಂದು ದಿನದ ಅಂತರದಲ್ಲಿ ಈ ರೀತಿ ವರದಿ ಬಂದಿರುವುದು ಗೊಂದಲಕ್ಕೆ ಕಾರಣವಾಗಿದೆ.

ಇನ್ನು ಈ ಕುರಿತು ಮಾತನಾಡಿದ ಅವರು, ವರದಿ ಪಾಸಿಟಿವ್‌ ಬಂದುದರಿಂದ ಅಂಗಡಿಯ ಕೆಲಸಗಾರರನ್ನು ಕ್ವಾರಂಟೈನ್‌ನಲ್ಲಿರುವಂತೆ ಅವರವರ ಊರಿನ ಗ್ರಾಮ ಪಂಚಾಯಿತಿ​ಯವರು ತಿಳಿಸಿದ್ದಾರೆ. ಇದರಿಂದಾಗಿ ಕೆಲಸಗಾರರಿಲ್ಲದೇ ಅಂಗಡಿಯನ್ನೂ ತೆರೆಯುವಂತಿಲ್ಲ. ಇಷ್ಟು ಮಾತ್ರವಲ್ಲದೇ ಈ ಸಮಯದಲ್ಲಿ ಲಾಕ್‌ಡೌನ್‌ ಇದ್ದುದರಿಂದ ಕೆಲಸಗಾರರಿಗೆ ಮತ್ತು ತನಗೂ ಸಂಪರ್ಕವೇ ಇರಲಿಲ್ಲ. ಆದರೂ ಅವರೆಲ್ಲರನ್ನೂ ಮತ್ತು ಅವರ ಮನೆಯವರನ್ನು ಕ್ವಾರಂಟೈನ್‌ಗೆ ಒಳಪಡಿಸಿರುವುದರಿಂದ ಅವರಿಗೆ ಆಗುತ್ತಿರುವ ತೊಂದರೆಗೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.

ಆಸ್ಪತ್ರೆಯಲ್ಲಿ 84 ಸಾವಿರ ರೂಪಾಯಿ ಬಿಲ್‌ ಆಗಿದೆ. ನನ್ನ ಜತೆಗೆ ಆಸ್ಪತ್ರೆಗೆ ಬಂದಿದ್ದ ಶರತ್‌ ಅಡ್ಕಾರ್‌ ಎಂಬುವರಿಗೆ ನೆಗೆಟಿವ್‌ ಬಂದಿದ್ದರೂ ಕೇವಲ 2 ದಿನಕ್ಕೆ 21 ಸಾವಿರದ 300 ರೂಪಾಯಿ ಬಿಲ್‌ ಆಗಿದೆ. ಇಲ್ಲಿ ಹಣ ವಸೂಲಿ ಮಾಡುವ ದಂಧೆ ನಡೆದಂತೆ ತೋಚುತ್ತದೆ ಎಂದು ಆರೋಪಿಸಿದ್ದಾರೆ.

ABOUT THE AUTHOR

...view details