ಮಂಗಳೂರು:ಮದುವೆಯ ದಿಬ್ಬಣದ ಬಸ್ ಹಾಗೂ ಖಾಸಗಿ ಬಸ್ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಸುಮಾರು 30 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡದ ಬಿ.ಸಿ. ರೋಡ್- ಪೊಳಲಿ ರಸ್ತೆಯ ತಿರುವಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಇದರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಲ್ಪನೆ ಬಳಿ ಖಾಸಗಿ ಬಸ್ಗೆ ಗುದ್ದಿದ ಮದುವೆ ದಿಬ್ಬಣದ ಬಸ್... 30 ಮಂದಿಗೆ ಗಾಯ - ಮದುವೆಯ ದಿಬ್ಬಣದ ಬಸ್ ಹಾಗೂ ಖಾಸಗಿ ಬಸ್ ಮಧ್ಯೆ ಅಪಘಾತ
ಮದುವೆಯ ದಿಬ್ಬಣದ ಬಸ್ ಹಾಗೂ ಖಾಸಗಿ ಬಸ್ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಸುಮಾರು 30 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡದ ಬಿ.ಸಿ.ರೋಡ್- ಪೊಳಲಿ ರಸ್ತೆಯ ತಿರುವಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ.
![ಕಲ್ಪನೆ ಬಳಿ ಖಾಸಗಿ ಬಸ್ಗೆ ಗುದ್ದಿದ ಮದುವೆ ದಿಬ್ಬಣದ ಬಸ್... 30 ಮಂದಿಗೆ ಗಾಯ two-bus-accident-in-mangalore](https://etvbharatimages.akamaized.net/etvbharat/prod-images/768-512-6094206-thumbnail-3x2-sanju.jpg)
ಮದುವೆ ದಿಬ್ಬಣದ ಬಸ್ನಿಂದ ಖಾಸಗಿ ಬಸ್ಗೆ ಡಿಕ್ಕಿ
ಕಲ್ಪನೆ ಬಳಿ ಖಾಸಗಿ ಬಸ್ಗೆ ಗುದ್ದಿದ ಮದುವೆ ದಿಬ್ಬಣದ ಬಸ್
ಎರಡೂ ಬಸ್ ಗಳು ಬಿ.ಸಿ .ರೋಡ್ನಿಂದ ಪೊಳಲಿ ಕಡೆಗೆ ಸಂಚರಿಸುತ್ತಿದ್ದವು. ಕಲ್ಪನೆ ಎಂಬಲ್ಲಿರುವ ತಿರುವಿನಲ್ಲಿ ಮುಂದಿನಿಂದ ಹೋಗುತ್ತಿದ್ದ ರೂಟ್ ಬಸ್ಗೆ ಹಿಂದಿನಿಂದ ಬರುತ್ತಿದ್ದ ಮದುವೆ ದಿಬ್ಬಣದ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಮದುವೆ ದಿಬ್ಬಣದ ಬಸ್ ಚರಂಡಿಗೆ ಬಿದ್ದರೆ, ರೂಟ್ ಬಸ್ ರಸ್ತೆಯಲ್ಲೇ ಪಲ್ಟಿಯಾಗಿದೆ.
ದುರ್ಘಟನೆಯಲ್ಲಿ ಸುಮಾರು 30 ಜನರು ಗಾಯಗೊಂಡಿದ್ದು, ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ಬಸ್ ಗಳನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
Last Updated : Feb 16, 2020, 8:03 PM IST