ಮಂಗಳೂರು:ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಬಂಧನ ವಿರೋಧಿಸಿ ಮಂಗಳೂರಿನ ವಿವಿಧೆಡೆ ಬಸ್ ಮೇಲೆ ಕಲ್ಲು ತೂರಾಟ ಮಾಡಿದ್ದ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಡಿಕೆಶಿ ಬಂಧನ ವಿರೋಧಿಸಿ ಬಸ್'ಗೆ ಕಲ್ಲು ತೂರಿದ್ದ ಇಬ್ಬರ ಬಂಧನ - ಬಸ್ ಮೇಲೆ ಕಲ್ಲು ತೂರಾಟ
ಡಿ.ಕೆ ಶಿವಕುಮಾರ್ ಬಂಧನ ವಿರೋಧಿಸಿ, ಮಂಗಳೂರಿನಲ್ಲಿ ಬಸ್ಗಳ ಮೇಲೆ ಕಲ್ಲು ತೂರಟ ನಡೆಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇಬ್ಬರ ಬಂಧನ
ಜೆಪ್ಪು ನಿವಾಸಿ ಮಹಿನ್ ಅಬ್ದುಲ್ ರಹಿಮಾನ್ (18), ಕುದ್ರೋಳಿ ನಿವಾಸಿ ಅಬ್ದುಲ್ ಮನ್ನಾನ್ (21) ಬಂಧಿತರು. ಸೆ.4 ರಂದು ದುಷ್ಕರ್ಮಿಗಳ ಗುಂಪುಗಳಿಂದ ಮಂಗಳೂರು ನಗರದಲ್ಲಿ ಬಲ್ಮಠ, ಫಳ್ನೀರ್, ನಂದಿಗುಡ್ಡೆಯಲ್ಲಿನ ಸರ್ಕಾರಿ ಹಾಗೂ ಖಾಸಗಿ ಬಸ್'ಗಳಿಗೆ ಇವರು ಕಲ್ಲು ತೂರಿದ್ದರು.
ಘಟನೆಯಲ್ಲಿ ಹಲವು ಬಸ್ಗಳ ಗಾಜುಗಳು ಪುಡಿಯಾಗಿದ್ದವು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮಂಗಳೂರು ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.