ಮಂಗಳೂರು :ನಗರದ ಪೊಲೀಸರಿಬ್ಬರು ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಹಲ್ಲೆ ನಡೆಸಿದ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಸಿಬ್ಬಂದಿಯು ಸಮವಸ್ತ್ರದಲ್ಲಿರುವಾಗಲೇ ಹಲ್ಲೆ ನಡೆದಿತ್ತು.
ಡ್ಯಾನಿ ಪೌಲ್ (39) ಮತ್ತು ಮ್ಯಾಕ್ಷಿಂ ಜೋಸೆಫ್(54) ಬಂಧಿತ ಆರೋಪಿಗಳು. ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಶಿವಾನಂದ ಡಿ ಟಿ ಮತ್ತು ಬೀರೇಂದ್ರ ಅವರು ಜನವರಿ 18ರಂದು ಕರ್ತವ್ಯ ಮುಗಿಸಿ ವಾಮಂಜೂರಿನ ವಸತಿಗೃಹಕ್ಕೆ ತೆರಳುತ್ತಿದ್ದ ಸಮಯ ಯೆಯ್ಯಾಡಿ ಜಂಕ್ಷನ್ ಹತ್ತಿರ ಕಾರಿನಲ್ಲಿದ್ದ ಇಬ್ಬರು ತಡೆದಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಸಮವಸ್ತ್ರದಲ್ಲಿದ್ದ ಇಬ್ಬರನ್ನು ತಡೆದು ನಿಲ್ಲಿಸಿದ ಇವರು ಬೈಕಿನ ಕೀ ತೆಗೆದು ಸಮವಸ್ತ್ರ ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನೀವು ನಕಲಿ ಪೊಲೀಸರು, ರೋಲ್ ಕಾಲ್ ಮಾಡುತ್ತಿದ್ದೀರಿ ಎಂದು ನಿಂದಿಸಿ ಸಮವಸ್ತ್ರದ ಬಟನ್ ಕಿತ್ತು ಹಾಕಿ ಇಬ್ಬರಿಗೆ ಹಲ್ಲೆ ಮಾಡಿ ಪೊಲೀಸ್ ಇಲಾಖೆಗೆ ನಿಂದಿಸಿ ಅವರ ಸ್ಲೋ ಚಾಟನ್ನು ಕಿತ್ತು ಹಾಕಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಸೆಲ್ಫಿಗೋಸ್ಕರ ಬೈಕ್ ಸ್ಟಂಟ್ ಮಾಡಲು ಹೋಗಿ ಭೀಕರ ಅಪಘಾತ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ..