ಉಪ್ಪಿನಂಗಡಿ:ಇಲಿ ಪಾಷಾಣ ತಿಂದು ಎರಡೂವರೆ ವರ್ಷದ ಹೆಣ್ಣು ಮಗುವೊಂದು ಮೃತಪಟ್ಟ ದಾರುಣ ಘಟನೆ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ಕೆಮ್ಮಾರದಲ್ಲಿ ನಡೆದಿದೆ. ಇಲ್ಲಿನ ನಿವಾಸಿ, ನಿವೃತ್ತ ಸೈನಿಕ ಸೈಜು ಎಂಬುವರ ಪುತ್ರಿ ಮೃತಪಟ್ಟ ಮಗು.
ಜೂ.19 ರಂದು ಬೆಳಗ್ಗೆ ಮಗುವಿನ ತಂದೆ, ತಾಯಿ ಮನೆಯಲ್ಲಿ ಪಿವಿಎಸ್ ಪೈಪ್ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಸ್ವಚ್ಛಗೊಳಿಸಿದ್ದು, ಇದರಲ್ಲಿ ಎರಡು-ಮೂರು ತಿಂಗಳುಗಳ ಹಿಂದೆ ತಂದಿಟ್ಟಿದ್ದ ಇಲಿ ಪಾಷಾಣದ ಟ್ಯೂಬ್ ಸಹ ಇತ್ತು ಎನ್ನಲಾಗ್ತಿದೆ. ಮನೆಯವರು ಕೆಲಸ ಮಾಡುತ್ತಿರುವಾಗ ಮಗು ಆಟವಾಡುತ್ತ ಬಂದು ಇಲಿ ಪಾಷಾಣವನ್ನು ತಿಂದಿದೆ ಎಂದು ಹೇಳಲಾಗುತ್ತಿದೆ.