ಕರ್ನಾಟಕ

karnataka

ETV Bharat / state

ಅಕ್ರಮ ಕಸಾಯಿಖಾನೆ ಮೇಲೆ ದಾಳಿ:  ಇಬ್ಬರು ಆರೋಪಿಗಳ ಬಂಧನ - ಅಕ್ರಮ ಕಸಾಯಿ ಖಾನೆಗೆ ದಾಳಿ

ದನಗಳನ್ನ ವಧೆ ಮಾಡುತ್ತಿದ್ದ ಅಡ್ಡೆಗಳ ಮೇಲೆ ದಾಳಿ ಮಾಡಿದ ಸೌಮ್ಯ ನೇತೃತ್ವದ ತಂಡ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

two accused arrest in mangalore
ಅಕ್ರಮ ಕಸಾಯಿ ಖಾನೆಗೆ ದಾಳಿ : ಇಬ್ಬರು ಆರೋಪಿಗಳ ಬಂಧನ

By

Published : May 1, 2020, 8:14 PM IST

ಬೆಳ್ತಂಗಡಿ:ಅಕ್ರಮವಾಗಿ ದನಗಳನ್ನ ಕೊಲ್ಲುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಪುಂಜಾಲಕಟ್ಟೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಾಳಿಯ ವೇಳೆ ಓರ್ವ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ. ಮಚ್ಚಿನ ನಿವಾಸಿಗಳಾದ ಮಹಮ್ಮದ್ ಹನೀಫ್ ಮತ್ತು ಮಹಮ್ಮದ್ ಸಾಧಿಕ್ ಬಂಧಿತ ಆರೋಪಿಗಳಾಗಿದ್ದಾರೆ.

ಹಂಝ ಪರಾರಿಯಾದ ಆರೋಪಿ. ಬಂಧಿತರಿಂದ ಸುಮಾರು 3,000 ಮೌಲ್ಯದ 15 ಕೆ.ಜಿ.ದನದ ಮಾಂಸವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಜೊತೆಗೆ ಕೊಲ್ಲಲು ಬಳಸಿದ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಬೆರ್ಬಲಾಜೆ ಮಹಮ್ಮದ್ ಹನೀಫ್ ಅವರ ಮನೆಯ ಹಿಂಬದಿಯ ಕೊಟ್ಟಿಗೆಯಲ್ಲಿ ಅಕ್ರಮವಾಗಿ ದನಗಳ ವಧೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪುಂಜಾಲಕಟ್ಟೆ ಎಸ್.ಐ.ಸೌಮ್ಯ ನೇತೃತ್ವದ ತಂಡ ದಾಳಿ ನಡೆಸಿತ್ತು.

ABOUT THE AUTHOR

...view details