ಕರ್ನಾಟಕ

karnataka

ETV Bharat / state

ಮಂಗಳೂರು ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಟ್ವಿಸ್ಟ್​: ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದ್ದೇನು!? - ಬೀದರ್ ಜಿಲ್ಲೆಯ ಆನಂದನಗರ ಮೂಲದ ವೈಶಾಲಿ ಗಾಯಕ್ ವಾಡ್

Mangaluru MBBS student suicide case: ಬೀದರ್ ಜಿಲ್ಲೆಯ ಆನಂದನಗರ ಮೂಲದ ವೈಶಾಲಿ ಗಾಯಕ್ ವಾಡ್ ಅವರು ನಗರದ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಇಂಟರ್​ಶಿಪ್​ ವಿದ್ಯಾರ್ಥಿನಿಯಾಗಿದ್ದು ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು. ಈ ಆತ್ಮಹತ್ಯೆಗೆ ಕಾರಣ ಬಹಿರಂಗವಾಗಿದೆ.

Twist for MBBS internship student  suicide case
ಎಂಬಿಬಿಎಸ್ ಇಂಟರ್ನ್ಶಿಪ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಟ್ವಿಸ್ಟ್

By

Published : Dec 21, 2021, 7:04 AM IST

ಮಂಗಳೂರು: ನಗರದ ಕಣಚೂರು ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ಇಂಟರ್​ಶಿಪ್​ ವಿದ್ಯಾರ್ಥಿನಿ ವೈಶಾಲಿ ಗಾಯಕ್ ವಾಡ್(25) ಆತ್ಮಹತ್ಯೆಗೆ ಪ್ರೇಮಿಯೊಂದಿಗಿನ ವಿರಸವೇ ಕಾರಣ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.

ಬೀದರ್ ಜಿಲ್ಲೆಯ ಆನಂದನಗರ ಮೂಲದ ವೈಶಾಲಿ ಗಾಯಕ್ ವಾಡ್ ಅವರು ನಗರದ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಇಂಟರ್​ಶಿಪ್​ ವಿದ್ಯಾರ್ಥಿನಿಯಾಗಿದ್ದು, ಎರಡು ದಿನಗಳ ಹಿಂದೆ ತಾನು ನೆಲೆಸಿದ್ದ ಮಂಗಳೂರಿನ ಹೊರವಲಯದಲ್ಲಿರುವ ಕುತ್ತಾರು ಮಲ್ಲೂರು ಸಿಲಿಕಾನಿಯಾ ಅಪಾರ್ಟ್‌ಮೆಂಟ್ ನ ತನ್ನ ಫ್ಲ್ಯಾಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದನ್ನೂ ಓದಿ: ಆಗಸದಲ್ಲಿ ನಕ್ಷತ್ರದಂತೆ ಗೋಚರಿಸಿದ ಬೆಳಕಿನ ಸರ... ವಿಜ್ಞಾನಿಗಳು ಹೇಳಿದ್ದು ಹೀಗೆ

ಇದೀಗ ಆಕೆಯ ಆತ್ಮಹತ್ಯೆಗೆ ಪ್ರೇಮಿಯೊಂದಿಗಿನ ವಿರಸವೇ ಕಾರಣವೆಂದು ತಿಳಿದು ಬಂದಿದೆ. ವೈಶಾಲಿ ಗಾಯಕ್ ವಾಡ್ ಗೆ ಸಹಪಾಠಿ ಕೇರಳ ರಾಜ್ಯದ ಪಾಲಕ್ಕಾಡ್ ಸುಜೀಶ್(24) ಎಂಬಾತನೊಂದಿಗೆ ಪ್ರೇಮವಿತ್ತು. ಆತ ಆಕೆಯಿರುವ ಅಪಾರ್ಟ್‌ಮೆಂಟ್ ನ ಮತ್ತೊಂದು ಫ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದ. ಆದರೆ ಇದೀಗ ಇವರಿಬ್ಬರ ನಡುವಿನ ವಿರಸದಿಂದಲೇ ವೈಶಾಲಿ ಗಾಯಕ್​ವಾಡ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಉಳ್ಳಾಲ ಪೊಲೀಸರು ಸುಜೀಶ್​ಅನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details