ಕರ್ನಾಟಕ

karnataka

ETV Bharat / state

ತುಳು ಭಾಷೆಯಲ್ಲಿಯೇ ಶಿಕ್ಷಣಕ್ಕಾಗಿ ಒತ್ತಾಯ: ಆ.16ರಂದು ಟ್ವೀಟ್ ಅಭಿಯಾನ

ತುಳು ಭಾಷೆಯ ಮಕ್ಕಳಿಗೆ ಆ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಲು ಜೈ ತುಳುನಾಡು ಸಂಘಟನೆ ಆ.16ರಂದು ಟ್ವಿಟರ್ ನಲ್ಲಿ ಅಭಿಯಾನ ನಡೆಸಲಿದೆ.

Tweet campaign by Jai Tulunadu Organization
Tweet campaign by Jai Tulunadu Organization

By

Published : Aug 14, 2020, 4:11 PM IST

ಮಂಗಳೂರು:ತುಳು ಭಾಷೆಯ ಮಕ್ಕಳಿಗೆ ಮಾತೃಭಾಷೆ ತುಳುವಿನಲ್ಲಿಯೇ ಶಿಕ್ಷಣ ದೊರಕಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ಜೈ ತುಳುನಾಡು ಸಂಘಟನೆ ಆ.16ರಂದು ಟ್ವೀಟ್ ಅಭಿಯಾನ ನಡೆಸಲಿದೆ.

ಜೈ ತುಳುನಾಡು ಸಂಘಟನೆ #EducationalTulu ಎಂಬ ಟ್ವೀಟ್ ಅಭಿಯಾನ ನಡೆಸಲಿದೆ. ಈ ಮೂಲಕ‌ ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯ ಪ್ರಕಾರ ತುಳುವರಿಗೆ ತುಳುಭಾಷೆಯಲ್ಲಿಯೇ ಶಿಕ್ಷಣ ಪಡೆಯುವ ಅಧಿಕಾರ ಇದೆ ಎಂದು ಸರ್ಕಾರಕ್ಕೆ ಒತ್ತಾಯವನ್ನು ಮಾಡಲಾಗುತ್ತದೆ.

ಈ ಹಿಂದೆ ತುಳುಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕು. ತುಳುಭಾಷೆಯನ್ನು ಕರ್ನಾಟಕ ಹಾಗೂ ಕೇರಳದ ಅಧಿಕೃತ ರಾಜ್ಯ ಭಾಷೆಯಾಗಿ ಘೋಷಣೆ ಮಾಡಬೇಕು. ಅಲ್ಲದೆ ತುಳುಲಿಪಿಯನ್ನು ಸಾರ್ವಜನಿಕರಿಗೆ ಕಲಿಸುವಂತಹ ದೊಡ್ಡ ಮಟ್ಟದ ಕಾರ್ಯ ಆಗಬೇಕೆಂದು ಜೈ ತುಳುನಾಡು ಸಂಘಟನೆ ಟ್ವೀಟ್ ಅಭಿಯಾನ ನಡೆಸಿತ್ತು. ಈ ಅಭಿಯಾನದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಸಚಿವೆ ಶೋಭಾ ಕರಂದ್ಲಾಜೆ, ದ.ಕ.ಜಿಲ್ಲೆಯ ಶಾಸಕರೆಲ್ಲರೂ ಟ್ವೀಟ್ ಮಾಡುವ ಮೂಲಕ ಅಭಿಯಾನದೊಂದಿಗೆ ಕೈಜೋಡಿಸಿದ್ದರು‌.

ಅದೇ ರೀತಿ ಈ ಬಾರಿಯ #EducationalTulu ಟ್ವೀಟ್ ಅಭಿಯಾನದಲ್ಲಿ ಯಾವೆಲ್ಲಾ ಗಣ್ಯವ್ಯಕ್ತಿಗಳು‌ ಭಾಗವಹಿಸಲಿದ್ದಾರೆ ಎಂಬುದರ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.

ABOUT THE AUTHOR

...view details