ಕರ್ನಾಟಕ

karnataka

ETV Bharat / state

IIFA ಅವಾರ್ಡ್ ನಲ್ಲಿ ಮಾತೃಭಾಷೆ ತುಳು ಪ್ರೇಮ ಮೆರೆದ ಸುನಿಲ್ ಶೆಟ್ಟಿ, ಐಶ್ವರ್ಯ ರೈ - tulu spoken by aishwarya rai

ಅಬುಧಾಬಿಯಲ್ಲಿ ನಡೆದ IIFA ಅವಾರ್ಡ್ ನಲ್ಲಿ ಬಾಲಿವುಡ್ ಸ್ಟಾರ್ ಗಳಾದ ಸುನಿಲ್ ಶೆಟ್ಟಿ, ಐಶ್ವರ್ಯ ರೈ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಿದ್ದ ಬಾಲಿವುಡ್​ ನಟ ಸುನಿಲ್ ಶೆಟ್ಟಿ ಮತ್ತು ನಟಿ ಐಶ್ವರ್ಯ ರೈ ತುಳುವಿನಲ್ಲಿ ಮಾತನಾಡಿ ಖುಷಿಪಟ್ಟಿದ್ದಾರೆ.

tulu-spoken-by-bollywood-actors-sunil-shetty-and-aishwarya-rai-in-iifa-awards-abudhabi
ಮಸ್ತ್ ಮೋಕೆ ಮಾತೇರ್ಡಲಾ, ನಮಸ್ಕಾರ ಸೌಖ್ಯನಾ..: IIFA ಅವಾರ್ಡ್ ನಲ್ಲಿ ಸುನಿಲ್ ಶೆಟ್ಟಿ, ಐಶ್ವರ್ಯ ರೈ ತುಳು ಮಾತು

By

Published : Jun 5, 2022, 9:38 PM IST

ಮಂಗಳೂರು : ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ತುಳು ಪ್ರತಿಯೊಬ್ಬರ ಅಭಿಮಾನದ ಭಾಷೆ. ಕರಾವಳಿಯಿಂದ ಮುಂಬೈಗೆ ತೆರಳಿ ಬಾಲಿವುಡ್ ಸ್ಟಾರ್ ಗಳಾದ ಸುನಿಲ್ ಶೆಟ್ಟಿ, ಐಶ್ವರ್ಯ ರೈ ತುಳು ಭಾಷೆಯನ್ನು ಪ್ರೀತಿಸುತ್ತಾರೆ. ನಿನ್ನೆ ಅಬುಧಾಬಿಯಲ್ಲಿ ನಡೆದ IIFA ಅವಾರ್ಡ್ ನಲ್ಲಿ ಬಾಲಿವುಡ್ ಸ್ಟಾರ್ ಗಳಾದ ಸುನಿಲ್ ಶೆಟ್ಟಿ, ಐಶ್ವರ್ಯ ರೈ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಿದ್ದ ಸುನಿಲ್ ಶೆಟ್ಟಿ ಮತ್ತು ಐಶ್ವರ್ಯ ರೈ ಬಳಿ ಮಂಗಳೂರಿನ ಆರ್ ಜೆ ಎರೊಲ್ ಅವರು ತುಳುವಿನಲ್ಲಿ ಮಾತನಾಡಲು ವಿನಂತಿಸಿದ್ದಾರೆ.

IIFA ಅವಾರ್ಡ್ ನಲ್ಲಿ ಸುನಿಲ್ ಶೆಟ್ಟಿ, ಐಶ್ವರ್ಯ ರೈ ತುಳು ಮಾತು

ಮೊದಲು ಸುನಿಲ್ ಶೆಟ್ಟಿ ಅವರಲ್ಲಿ ವಿನಂತಿಸಿದಾಗ ತುಳುಟ್ ದಾದ ಪನ್ಪುನಿ, ಮಸ್ತ್ ಮೋಕೆ ಮಾತೇರ್ಡಲಾ ( ತುಳುವಿನಲ್ಲಿ ಏನು ಹೇಳುವುದು. ತುಂಬಾ ಪ್ರೀತಿ ಎಲ್ಲರಲ್ಲಿಯೂ) ಎಂದಿದ್ದಾರೆ. ಬಳಿಕ ಐಶ್ವರ್ಯ ರೈ ಅವರಲ್ಲಿ ತುಳುವಿನಲ್ಲಿ ಏನಾದರೂ ಮಾತಾಡಿ ಅಂದಾಗ " ನಮಸ್ಕಾರ, ಸೌಖ್ಯನ" ( ನಮಸ್ಕಾರ, ಸೌಖ್ಯವೆ?) ಎಂದಿದ್ದಾರೆ.

ಅಬುಧಾಬಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಮಾನಿಯ ವಿನಂತಿಗೆ ಒಂದು ವಾಕ್ಯ ಪದವನ್ನು ತುಳುವಿನಲ್ಲಿ ಮಾತಾಡಿ ಇಬ್ಬರು ಸ್ಟಾರ್ ನಟರು ತಮ್ಮ ತುಳು ಅಭಿಮಾನವನ್ನು ಪ್ರದರ್ಶಿಸಿದ್ದಾರೆ.

ಓದಿ :ಪೀರ್‌ಪಾಷಾ ಬಂಗ್ಲೆ ಮೂಲ ಅನುಭವ ಮಂಟಪ : ಸಂಶೋಧನೆ ನಡೆಸಲು ಸಿಎಂಗೆ ಮಠಾಧೀಶರ ನಿಯೋಗ ಮನವಿ

ABOUT THE AUTHOR

...view details