ಕರ್ನಾಟಕ

karnataka

ETV Bharat / state

ಕುವೈತ್​​ನಲ್ಲೂ ಮೊಳಗಿದ ತುಳುನಾಡ ಪ್ರೇಮಗೀತೆ... ಪ್ರೇಕ್ಷರನ್ನ ರಂಜಿಸಿದ ವಿದೇಶಿ ಸಿಂಗರ್​ - undefined

ಮಾರ್ಚ್ 29ರಂದು ಕುವೈತ್​​​ನಲ್ಲಿ ನಡೆದಿದ್ದ ತುಳುಕೂಟ ರಸಮಂಜರಿ ಕಾರ್ಯಕ್ರಮದಲ್ಲಿ ಕುವೈತ್​​ ಖ್ಯಾತ ಹಾಡುಗಾರ ಮುಬಾರಕ್ ಅಲ್ ರಶೀದ್ ಅವರು ಪಗೆತ ಪುಗೆ( ಸೇಡಿನ ಹೊಗೆ) ಎಂಬ ಹಳೆಯ ತುಳು ಚಲನಚಿತ್ರದ ‘ಮೋಕೆದ ಸಿಂಗಾರಿ ಉಂತುದೆ ಬಂಗಾರಿ' ( ಪ್ರೀತಿಯ ಸಿಂಗಾರಿ, ನಿಲ್ಲೇ ಬಂಗಾರಿ) ಹಾಡನ್ನು ಹಾಡಿದರು.

ಕುವೈಟ್​ನಲ್ಲಿ ತುಳು ಹಾಡು

By

Published : Apr 2, 2019, 7:47 PM IST

Updated : Apr 2, 2019, 9:38 PM IST

ಮಂಗಳೂರು: ತುಳು ಭಾಷೆಯ ಎವರ್​ಗ್ರೀನ್ ಸೂಪರ್ ಹಿಟ್ ಹಾಡೊಂದನ್ನು ಕುವೈತ್​​ ದೇಶದ ಹಾಡುಗಾರನೋರ್ವ ಗಾನಸುಧೆ ಮೂಲಕ ತುಳುವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಹಾಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಗೆತ ಪುಗೆ( ಸೇಡಿನ ಹೊಗೆ) ಎಂಬ ಹಳೆಯ ತುಳು ಚಲನಚಿತ್ರದ ‘ಮೋಕೆದ ಸಿಂಗಾರಿ ಉಂತುದೆ ಬಂಗಾರಿ' ( ಪ್ರೀತಿಯ ಸಿಂಗಾರಿ, ನಿಲ್ಲೇ ಬಂಗಾರಿ) ಎಂಬುದು ತುಳುನಾಡಿನ ಪ್ರಸಿದ್ದ ಹಾಡು. ರಸಮಂಜರಿಗಳಲ್ಲಿ, ತುಳುವರ ಕಾರ್ಯಕ್ರಮಗಳಲ್ಲಿ ಈ ಹಾಡು ಇಂದಿಗೂ ಕೇಳಿ ಬರುತ್ತದೆ. ಈ ಹಾಡು ಇದೀಗ ಸಾಗರದಾಚೆಯ ಕುವೈತ್​​ನಲ್ಲೂ ಫೇಮಸ್ ಆಗಿದೆ.

ಕುವೈಟ್​ನಲ್ಲಿ ತುಳು ಹಾಡು

ಮಾರ್ಚ್ 29ರಂದು ಕುವೈತ್​​ನಲ್ಲಿತುಳು ಕೂಟವು ರಸಮಂಜರಿ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಕುವೈತ್​​ ಖ್ಯಾತ ಹಾಡುಗಾರ ಮುಬಾರಕ್ ಅಲ್ ರಶೀದ್ ಅವರ ಗಾಯನ ಕಾರ್ಯಕ್ರಮವಿತ್ತು. ತುಳು‌ಭಾಷಿಕರೇ ತುಂಬಿದ್ದ ಕಾರ್ಯಕ್ರಮದಲ್ಲಿ ಈ ಹಾಡುಗಾರ ಮೋಕೆದ ಸಿಂಗಾರಿ, ಉಂತುದೆ ಬಂಗಾರಿ ಹಾಡನ್ನು ಹಾಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಅಷ್ಟೇ ಅಲ್ಲ, ಇದೇ ಹಾಡನ್ನು ತಮ್ಮ ಅರೇಬಿಕ್ ಭಾಷೆಯಲ್ಲೂ ಹಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಇದೀಗ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Last Updated : Apr 2, 2019, 9:38 PM IST

For All Latest Updates

TAGGED:

ABOUT THE AUTHOR

...view details