ಮಂಗಳೂರು: ಐತಿಹಾಸಿಕ ಮಂಗಳಾದೇವಿ ದೇವಸ್ಥಾನಕ್ಕೆ ಹೋಗುವ ಪ್ರಮುಖ ರಸ್ತೆಯಲ್ಲಿ ತುಳು ಲಿಪಿಯ ನಾಮಫಲಕಕ್ಕೆ ಮನವಿ ನೀಡಿದ್ದ ಬಾಲಕಿಯಿಂದಲೇ ನಾಮಫಲಕವನ್ನು ಉದ್ಘಾಟಿಸಿದ ಅಪರೂಪದ ಸನ್ನಿವೇಶ ಮಂಗಳೂರಿನಲ್ಲಿ ನಡೆದಿದೆ.
ಮಂಗಳಾದೇವಿ ರಸ್ತೆಗೆ ತುಳು ಲಿಪಿಯ ನಾಮಫಲಕ: ಮನವಿ ಕೊಟ್ಟ ಬಾಲಕಿಯಿಂದ ಉದ್ಘಾಟನೆ - ಮಂಗಳೂರಿನಲ್ಲಿ ಮಂಗಳಾ ದೇವಿ ದೇವಸ್ಥಾನ ದಾರಿ ಸೂಚಕ ತುಳು ನಾಮಫಲಕ
ಮಂಗಳಾದೇವಿ ದೇವಸ್ಥಾನ ರಸ್ತೆಗೆ ತುಳುವೆರ್ ಕುಡ್ಲ ಸಂಘಟನೆಯ ಸಹಯೋಗದೊಂದಿಗೆ ನಾಮಫಲಕ ಅಳವಡಿಸಲಾಗಿತ್ತು. ಇದರ ಉದ್ಘಾಟನೆ ಸಮಾರಂಭ ಇಂದು ನಡೆದಿದ್ದು ಶಾಸಕ ವೇದವ್ಯಾಸ ಕಾಮತ್ ಭಾಗವಹಿಸಿದ್ದರು.

ಕೆಲವು ಸಮಯದ ಹಿಂದೆ ತುಳು ಸಂಘಟನೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ, ಶಿಶ್ಮಿತ ಎನ್ನುವ ಪುಟ್ಟ ಬಾಲಕಿ ಮಂಗಳeದೇವಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ತುಳು ಲಿಪಿಯ ನಾಮಫಲಕ ಅಳವಡಿಸುವಂತೆ ಮನವಿ ಸಲ್ಲಿಸಿದ್ದಳು. ಆಕೆ ಸ್ವತಃ ತುಳು ಲಿಪಿಯಲ್ಲಿ ಮನವಿ ಬರೆದು ನೀಡಿದ್ದಳು.
ಬಾಲಕಿಯ ಕೋರಿಕೆಯಂತೆ ಮಂಗಳಾದೇವಿ ದೇವಸ್ಥಾನ ರಸ್ತೆಗೆ ತುಳುವೆರ್ ಕುಡ್ಲ ಸಂಘಟನೆಯ ಸಹಯೋಗದೊಂದಿಗೆ ನಾಮಫಲಕ ಅಳವಡಿಸಲಾಗಿತ್ತು. ಇದರ ಉದ್ಘಾಟನೆ ಸಮಾರಂಭ ಇಂದು ನಡೆದಿದ್ದು ಶಾಸಕ ವೇದವ್ಯಾಸ ಕಾಮತ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮನವಿಯನ್ನು ನೀಡಿದ್ದ ಶಿಶ್ಮಿತಾಳ ಕೈಯಲ್ಲಿ ನಾಮಫಲಕವನ್ನು ಉದ್ಘಾಟಿಸಲಾಯಿತು.