ಮಂಗಳೂರು : ತುಳು ಸಿನಿಮಾ ರಂಗದಲ್ಲಿ 'ಅರ್ಜುನ್ ವೆಡ್ಸ್ ಅಮೃತಾ' ಎಂಬ ಹಿಟ್ ಚಿತ್ರ ನೀಡಿದ್ದ ಪ್ರತಿಭಾವಂತ ನಿರ್ದೇಶಕ ರಘು ಶೆಟ್ಟಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ರಘು ಶೆಟ್ಟಿಯವರು, ಶನಿವಾರ ಸಂಜೆ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ತಮ್ಮ ಮೊದಲ ಸಿನಿಮಾ 'ಅರ್ಜುನ್ ವೆಡ್ಸ್ ಅಮೃತಾ' ಮೂಲಕ ಅಸಂಖ್ಯಾತ ಪ್ರೇಮಿಗಳ ಮನಸ್ಸನ್ನು ರಘುಶೆಟ್ಟಿ ಸೆಳೆದಿದ್ದರು. ಅಲ್ಲದೆ ಇದೊಂದು ಫ್ಯಾಮಿಲಿ ಹಿಟ್ ಸಿನಿಮಾವಾಗಿ ಗಮನ ಸೆಳೆದಿತ್ತು. ಈ ಸಿನಿಮಾ ನಿರ್ದೇಶನಕ್ಕೆ ರಘು ಶೆಟ್ಟಿಯವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡಾ ಪಡೆದಿದ್ದರು.