ಕರ್ನಾಟಕ

karnataka

ETV Bharat / state

ಪುತ್ತೂರಿನ ಮಿನಿವಿಧಾನಸೌಧದ ಹಿಂಭಾಗ ಗಬ್ಬು ನಾರುತ್ತಿದೆ ಕಸದ ರಾಶಿ, ಅಧಿಕಾರಿಗಳಿಗೆ ಕಾಣುತ್ತಿಲ್ಲವೇಕೆ? - Trash heap In puttur

ಪುತ್ತೂರು ತಾಲೂಕು ಕೇಂದ್ರದ ಪ್ರಮುಖ ತಾಣವಾಗಿರುವ ಮಿನಿ ವಿಧಾನಸೌಧದ ಹಿಂಭಾಗದಲ್ಲಿ ತ್ಯಾಜ್ಯದ ರಾಶಿ ತುಂಬಿಕೊಂಡು ಪುತ್ತೂರು ನಗರಸಭೆಯ 'ಸ್ವಚ್ಛ ಭಾರತ್​' ಘೋಷಣೆಯನ್ನು ಅಣಕಿಸುವಂತಿದೆ.

Trash heap
`ಸ್ವಚ್ಛತೆಯನ್ನು ಅಣಕಿಸುತ್ತಿದೆ.....! ಮಿನಿವಿಧಾನಸೌಧದ ಹಿಂಭಾಗದಲ್ಲಿ ಕಸದ ರಾಶಿ

By

Published : Dec 27, 2019, 9:33 AM IST

ಪುತ್ತೂರು(ದಕ್ಷಿಣ ಕನ್ನಡ): ಇಲ್ಲಿನ ತಾಲೂಕು ಕೇಂದ್ರದ ಪ್ರಮುಖ ತಾಣವಾಗಿರುವ ಮಿನಿ ವಿಧಾನಸೌಧದ ಹಿಂಭಾಗದಲ್ಲಿ ತ್ಯಾಜ್ಯದ ರಾಶಿ ತುಂಬಿಕೊಂಡಿದ್ದು ಪುತ್ತೂರು ನಗರಸಭೆಯ 'ಸ್ವಚ್ಛ ಭಾರತ್​' ಘೋಷಣೆಯನ್ನು ಅಣಕಿಸುತ್ತಿದೆ.

`ಸ್ವಚ್ಛತೆಯನ್ನು ಅಣಕಿಸುತ್ತಿದೆ.....! ಮಿನಿವಿಧಾನಸೌಧದ ಹಿಂಭಾಗದಲ್ಲಿ ಕಸದ ರಾಶಿ

ಉಪವಿಭಾಗಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ಕಚೇರಿಗಳಿರುವ ಮಿನಿ ವಿಧಾನಸೌಧದ ಹಿಂಭಾಗದಲ್ಲಿ ತ್ಯಾಜ್ಯ ತುಂಬಿದ್ದು ದುರ್ನಾತ ಬೀರುತ್ತಿದೆ. ಹಾಗಾಗಿ ಈ ಭಾಗದಲ್ಲಿ ಮೂಗು ಮುಚ್ಚಿಕೊಂಡು ಜನ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರಸಭಾ ವ್ಯಾಪ್ತಿಯಲ್ಲಿ ಮನೆ,ಮನೆ ಕಸ ಸಂಗ್ರಹ ಮಾಡುವ ವ್ಯವಸ್ಥೆ ಇದ್ದರೂ ನಗರಸಭೆಯ ಪಕ್ಕದಲ್ಲಿರುವ ಈ ಮಿನಿವಿಧಾನಸೌಧದ ಹಿಂಭಾಗದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯಲಾಗಿದೆ. ಹಾಗಿದ್ದರೂ ಇಲ್ಲೇ ಕೆಲಸ ಮಾಡುವ ಅಧಿಕಾರಿಗಳಿಗೆ ಇದು ಕಾಣುತ್ತಿಲ್ಲ ಎಂಬುದು ಅಚ್ಚರಿ ಮೂಡಿಸುತ್ತಿದೆ.

ಈ ಹಿಂದೆ ಇದೇ ಸ್ಥಳದಲ್ಲಿ ಬಾಯ್ಬಿಟ್ಟಿದ್ದ ಎರಡು ಶೌಚಾಲಯದ ಗುಂಡಿಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ತಕ್ಷಣ ಆಗಿನ ಉಪವಿಭಾಗಾಧಿಕಾರಿ ಎಚ್.ಕೆ ಕೃಷ್ಣಮೂರ್ತಿ ಇದಕ್ಕೆ ಕಬ್ಬಿಣದ ಮುಚ್ಚಳ ಹಾಕಿಸುವ ಮೂಲಕ ಇಲ್ಲಿ ಸೊಳ್ಳೆಗಳನ್ನು ನಿಯಂತ್ರಿಸಿದ್ದರು.

ABOUT THE AUTHOR

...view details