ಸುಳ್ಯ (ದಕ್ಷಿಣಕನ್ನಡ) : ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಭೂ ಕುಸಿತ ಉಂಟಾಗಿದೆ. ಏಕಾಏಕಿ ಭೂ ಕುಸಿತ ಉಂಟಾಗಿ ಟ್ರಾನ್ಸ್ಫಾರ್ಮರ್ ಧರಾಶಾಹಿಯಾಗಿರುವ ಘಟನೆ ಸುಳ್ಯ ಪೇಟೆಯಲ್ಲಿ ನಡೆದಿದೆ.
ಸುಳ್ಯ ಪೇಟೆಯಲ್ಲಿ ಏಕಾಏಕಿ ಭೂಕುಸಿತ : ಧರೆಗುರುಳಿದ ಟ್ರಾನ್ಸ್ಫಾರ್ಮರ್ - transformer damaged due to Land slide
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೇಟೆಯಲ್ಲಿ ಭಾರಿ ಮಳೆಗೆ ಭೂಕುಸಿತ ಉಂಟಾಗಿ ಟ್ರಾನ್ಸ್ಫಾರ್ಮರ್ ಧರೆಗುರುಳಿರುವ ಘಟನೆ ನಡೆದಿದೆ.
![ಸುಳ್ಯ ಪೇಟೆಯಲ್ಲಿ ಏಕಾಏಕಿ ಭೂಕುಸಿತ : ಧರೆಗುರುಳಿದ ಟ್ರಾನ್ಸ್ಫಾರ್ಮರ್ transformer-damaged-due-to-land-slide-in-sulya-city](https://etvbharatimages.akamaized.net/etvbharat/prod-images/04-11-2023/1200-675-19937788-thumbnail-16x9-yyy.jpg)
Published : Nov 4, 2023, 7:17 AM IST
|Updated : Nov 4, 2023, 7:36 AM IST
ನಗರದ ಪರಿವಾರಕಾನ ಉಡುಪಿ ಗಾರ್ಡನ್ ಹೋಟೆಲ್ ಬಳಿ ಭೂಕುಸಿತ ಉಂಟಾಗಿದ್ದು, ಇದರಿಂದಾಗಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಧರಾಶಾಹಿಯಾಗಿದೆ. ಈ ವೇಳೆ ವಿದ್ಯುತ್ ಕಡಿತಗೊಂಡಿದ್ದರಿಂದ ಸಂಭಾವ್ಯ ದುರಂತವೊಂದು ತಪ್ಪಿದಂತಾಗಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬ ತೆರವುಗೊಳಿಸುವ ಕಾರ್ಯ ನಡೆಸಿದ್ದಾರೆ. ಭೂ ಕುಸಿತ ಉಂಟಾಗಿರುವ ಸ್ಥಳಕ್ಕೆ ಯಾರೂ ಹೋಗದಂತೆ ತಡೆಯಲಾಗಿದೆ. ವಿದ್ಯುತ್ ಕಂಬ ಧರಾಶಾಹಿಯಾಗುವ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ :ನೇಪಾಳ, ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಪ್ರಬಲ ಭೂಕಂಪ; 69 ಜನ ಸಾವು