ಕರ್ನಾಟಕ

karnataka

ETV Bharat / state

ಸಂಚಾರ ಪೊಲೀಸರ ಖಡಕ್​​​​​ ಕಾರ್ಯಾಚರಣೆ...15 ಬಸ್​​ಗಳ ವಿರುದ್ಧ ಪ್ರಕರಣ ದಾಖಲು - ಪಾಂಡೇಶ್ವರ

ನಗರದಲ್ಲಿ ಸಂಚಾರಿ ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಕಾರ್ಯಾಚರಣೆ ಕೈಗೊಂಡ ಪಾಂಡೇಶ್ವರ ಸಂಚಾರ ಪೊಲೀಸರು ಚಾಲಕರ ಬೆವರಿಳಿಸಿದ್ದಾರೆ.

ಖಡಕ್​​ ಕಾರ್ಯಾಚರಣೆ

By

Published : Aug 20, 2019, 1:23 PM IST

ಮಂಗಳೂರು:ಒಂದು ಸರ್ಕಾರಿ ಬಸ್ ಸಹಿತ 15ಕ್ಕೂ ಅಧಿಕ ಖಾಸಗಿ ಬಸ್​ಗಳ ಮೇಲೆ ಶಬ್ದ ಮಾಲಿನ್ಯದ ಪ್ರಕರಣ ದಾಖಲಿಸಿದ್ದು, ಬಸ್ ಚಾಲನೆ ವೇಳೆ ಮೊಬೈಲ್ ಬಳಸಿದ ಆರೋಪದಲ್ಲಿ ಖಾಸಗಿ ಬಸ್ ಚಾಲಕನೋರ್ವನಿಗೆ ದಂಡ ವಿಧಿಸಲಾಗಿದೆ.

ನಗರದ ಆರ್​ಟಿಒ ಬಳಿ ಇಂದು ಬೆಳಗ್ಗೆ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಸುಮಾರು 70 ಕ್ಕೂ ಅಧಿಕ ಬಸ್​ಗಳನ್ನು ತಪಾಸಣೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ಕಶ ಶಬ್ದಗಳಿಂದ ಶಬ್ದ ಮಾಲಿನ್ಯವನ್ನು ಉಂಟುಮಾಡುವ ಬಸ್​ಗಳ ಹಾರ್ನ್​ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

15 ಬಸ್​​ಗಳ ಮೇಲೆ ಪ್ರಕರಣ ದಾಖಲು

ಬಸ್ ಚಾಲನೆ ವೇಳೆ ಮೊಬೈಲ್ ಬಳಕೆ:

ಬಸ್ ಚಾಲಕ ಸಂದೇಶ್ ನಾಯ್ಕ್ ಎಂಬಾತ ಕಾರ್ಕಳದಿಂದ ಮಂಗಳೂರಿಗೆ ಬಸ್ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಮೊಬೈಲ್​​ನಲ್ಲಿ ಮಾತನಾಡುತ್ತಿದ್ದ. ಈ ಬಗ್ಗೆ ಪ್ರಯಾಣಿಕರು ಪ್ರಶ್ನಿಸಿದರೂ ಬೇಜವಾಬ್ದಾರಿತನದ ಉತ್ತರ ನೀಡಿದ್ದನಂತೆ. ಇದು ಮಂಗಳೂರು ಪೊಲೀಸರ ಗಮನಕ್ಕೆ ಬಂದ ತಕ್ಷಣವೇ ಚಾಲಕನ ವಿರುದ್ಧ ಕ್ರಮ ಕೈಗೊಂಡು 1,100 ರೂ. ದಂಡವನ್ನು ಮಂಗಳೂರು ಸಂಚಾರ ವಿಭಾಗದ ಎಸಿಪಿಯವರು ವಿಧಿಸಿದ್ದಾರೆ.

ಚಾಲಕನ ವಿರುದ್ಧ ಕ್ರಮ ಕೈಗೊಂಡು 1,100 ರೂ. ದಂಡ

ABOUT THE AUTHOR

...view details