ಕರ್ನಾಟಕ

karnataka

ETV Bharat / state

ಟ್ರಾಫಿಕ್​ ಪೊಲೀಸರ ಮೇಲೆ ಹಲ್ಲೆ ಆರೋಪ: ಇಬ್ಬರ ಬಂಧನ: ಹೀಗಿದೆ ಜಟಾಪಟಿ VIDEO! - Traffic Police

ಮಂಗಳೂರಿನ ನಂತೂರು ವೃತ್ತದ ಬಳಿ ಕರ್ತವ್ಯ ನಿರತ ಕದ್ರಿ ಸಂಚಾರ ಠಾಣೆಯ ಕಾನ್‌ಸ್ಟೇಬಲ್ ಯತೀಶ್ ಎಂಬುವರ ಮೇಲೆ ಕಾರಿನಲ್ಲಿ ಇಬ್ಬರು ಹಲ್ಲೆ ನಡೆಸಿದ್ದು, ಹಲ್ಲೆ ಮಾಡಿದ ಇಬ್ಬರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಟ್ರಾಫಿಕ್​ ಪೊಲೀಸರ ಮೇಲೆ ಹಲ್ಲೆ ಆರೋಪ

By

Published : Oct 25, 2019, 5:55 PM IST

ಮಂಗಳೂರು:ಇಲ್ಲಿನ ನಂತೂರು ವೃತ್ತದ ಬಳಿ ಕರ್ತವ್ಯ ನಿರತ ಕದ್ರಿ ಸಂಚಾರಿ ಠಾಣೆಯ ಕಾನ್‌ಸ್ಟೇಬಲ್ ಯತೀಶ್ ಎಂಬವರ ಮೇಲೆ ಕಾರಿನಲ್ಲಿ ಬಂದ ಇಬ್ಬರು ಹಲ್ಲೆ ನಡೆಸಿದ್ದು, ಹಲ್ಲೆ ಮಾಡಿದ ಇಬ್ಬರನ್ನು ಕದ್ರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕೃಷ್ಣಾಪುರ 7ನೇ ಬ್ಲಾಕ್‌ನ ನಿವಾಸಿ ಇರ್ಫಾನ್ (31) ಹಾಗೂ ಪುತ್ತೂರು ಸಂಪ್ಯ ನಿವಾಸಿ ಅಬ್ದುಲ್ ಅಜೀಜ್​​ (52) ಬಂಧಿತರು.

ಟ್ರಾಫಿಕ್​ ಪೊಲೀಸರ ಮೇಲೆ ಹಲ್ಲೆ ಆರೋಪ

ನಂತೂರು ವೃತ್ತದ ಬಳಿ ಸಂಚಾರ ದಟ್ಟಣೆಗೆ ಕಾರಣವಾಗಿದ್ದ ಕಾರು ಚಾಲಕನನ್ನು ನಿಲ್ಲಿಸುವಂತೆ ಟ್ರಾಫಿಕ್ ಪೊಲೀಸ್ ಯತೀಶ್ ಸೂಚನೆ ನೀಡಿದಾಗ ಆತ ನಿರ್ಲಕ್ಷಿಸಿ ಮುಂದುವರಿದಿದ್ದಾನೆ. ಆಗ ಕಾನ್‌ಸ್ಟೇಬಲ್ ಅವರು ಕಾರಿನ ಫೋಟೊ ತೆಗೆದಿದ್ದಾರೆ. ಇದರಿಂದ ಕೋಪಗೊಂಡ ಇರ್ಫಾನ್ ಹಾಗೂ ಅಬ್ದುಲ್ ಅಜೀಜ್​​ ಕಾರನ್ನು ತಿರುಗಿಸಿ ಬಂದು ಯತೀಶ್ ಅವರಿಗೆ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿದ ಕದ್ರಿ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

ಆದರೆ ಆರೋಪಿಗಳಿಬ್ಬರು ಕಾನ್ಸ್​ಟೇಬಲ್​ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದು, ಈ ಕುರಿತು ಇನ್ನು ಪ್ರಕರಣ ದಾಖಲಾಗಿಲ್ಲ.

ABOUT THE AUTHOR

...view details