ಸುಳ್ಯ:ಮಾನಸಿಕ ಅಸ್ವಸ್ಥ ಬಾಲಕಿಗೆ ಕಿರುಕುಳ ನೀಡಿದ್ದಾರೆಂಬ ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಮಾನಸಿಕ ಅಸ್ವಸ್ಥ ಬಾಲಕಿಗೆ ಕಿರುಕುಳ..ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ದೂರು - sulya latest crime news
ಸುಳ್ಯ ಅರಂಬೂರು ಸಮೀಪದ ಮನೆಯಿಂದ ಮಾನಸಿಕ ಅಸ್ವಸ್ಥೆಯಾಗಿರುವ ಅಪ್ರಾಪ್ತ ಬಾಲಕಿಯೊಬ್ಬಳನ್ನು ಕರೆದುಕೊಂಡು ಹೋಗಿ ಯಾರೋ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
![ಮಾನಸಿಕ ಅಸ್ವಸ್ಥ ಬಾಲಕಿಗೆ ಕಿರುಕುಳ..ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ದೂರು torture on mentally disabled girl alligations in sulya](https://etvbharatimages.akamaized.net/etvbharat/prod-images/768-512-8874930-1085-8874930-1600619819714.jpg)
ಸುಳ್ಯ ಅರಂಬೂರು ಸಮೀಪ ಬಡಕುಟುಂಬವೊಂದು ವಾಸಿಸುತ್ತಿದ್ದು, ಮನೆಯಲ್ಲಿ ತಾಯಿ ಮತ್ತು ಓರ್ವ ಮಾನಸಿಕ ಅಸ್ವಸ್ಥ ಮಗಳು ಮಾತ್ರ ಇದ್ದಾರೆ. ಸೆಪ್ಟೆಂಬರ್18 ರಂದು ಅಪ್ರಾಪ್ತ ವಯಸ್ಸಿನ ಬಾಲಕಿಯು ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದಳು. ನಂತರ ಮನೆಯವರು ಮತ್ತು ಸ್ಥಳೀಯರು ಹಲವು ಕಡೆಗಳಲ್ಲಿ ಹುಡುಕಾಡಿದರೂ ಎಲ್ಲಿಯೂ ಬಾಲಕಿ ಪತ್ತೆಯಾಗಿರಲಿಲ್ಲ.
ಕೆಲ ಗಂಟೆಗಳ ನಂತರ ಬಾಲಕಿ ಸಮೀಪದ ರಸ್ತೆಯ ಬಳಿ ಕಂಡುಬಂದಿದ್ದು, ಈಕೆಯನ್ನು ವಿಚಾರಿಸಿದಾಗ ಯಾರೋ ತನ್ನನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾರೆ ಎಂಬುದಾಗಿ ಬಾಲಕಿ ಹೇಳಿದ್ದಾರೆ. ಬಾಲಕಿ ತಮ್ಮ ಶಾಲೆಯ ವಿದ್ಯಾರ್ಥಿನಿ ಎಂಬ ವಿಷಯ ತಿಳಿದ ಎಂ.ಬಿ. ಸದಾಶಿವ ಹಾಗೂ ಮಹಿಳಾ ಸಮಾಜದ ಅಧ್ಯಕ್ಷೆ ಹರಿಣಿ ಸದಾಶಿವರವರು ಕೂಡಲೇ ತಮ್ಮ ಶಾಲೆಯ ಇತರ ಶಿಕ್ಷಕರೊಂದಿಗೆ ಬಾಲಕಿಯ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.