ಮಂಗಳೂರು: ಟೋಕಿಯೊ ಒಲಿಂಪಿಕ್ಸ್ ಟೀಮ್ ಇಂಡಿಯಾ ಕೋಚ್, 'ದ್ರೋಣಾಚಾರ್ಯ' ಪುರಸ್ಕೃತ ನಿಹಾರ್ ಅಮೀನ್ ನಗರದ ಸಂತ ಅಲೋಶಿಯಸ್ ಈಜುಕೊಳಕ್ಕೆ ಭೇಟಿ ನೀಡಿದ್ದಾರೆ.
ಸಂತ ಅಲೋಶಿಯಸ್ ಈಜುಕೊಳಕ್ಕೆ ಟೋಕಿಯೊ ಒಲಿಂಪಿಕ್ಸ್ ಟೀಮ್ ಇಂಡಿಯಾ ಕೋಚ್ ಭೇಟಿ - mangalore news
ರಾಷ್ಟ್ರಮಟ್ಟದ ಈಜು ಚಾಂಪಿಯನ್ಶಿಪ್ನಲ್ಲಿ ರಾಜ್ಯದ ಈಜುಪಟುಗಳನ್ನು ಸಿದ್ಧಪಡಿಸುತ್ತಿದ್ದೇವೆ. ಈ ಮೂಲಕ ನಾವು ಹೆಚ್ಚಿನ ಪದಕಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದೇವೆ ಎಂದು ಟೋಕಿಯೊ ಒಲಿಂಪಿಕ್ಸ್ ಟೀಮ್ ಇಂಡಿಯಾ ಕೋಚ್ ಹೇಳಿದ್ದಾರೆ.
ಸಂತ ಅಲೋಶಿಯಸ್ ಈಜುಕೊಳಕ್ಕೆ ಭೇಟಿ ನೀಡಿದ ಟೋಕಿಯೊ ಒಲಿಂಪಿಕ್ಸ್ ಟೀಮ್ ಇಂಡಿಯಾ ಕೋಚ್
ಮಂಗಳೂರಿನಲ್ಲಿ ಉತ್ತಮ ಮೂಲಸೌಕರ್ಯಗಳ ಈಜುಕೊಳಗಳಿವೆ. ಇಲ್ಲಿ ಉತ್ತಮ ಈಜು ತರಬೇತುದಾರರಿದ್ದಾರೆ. ಇದೇ ಕಾರಣದಿಂದ ಸಂತ ಅಲೋಶಿಯಸ್ ಈಜುಕೊಳದಲ್ಲಿ ತರಬೇತು ಪಡೆದಿದ್ದ 7 ಮಕ್ಕಳು ರಾಜ್ಯಮಟ್ಟದಲ್ಲಿ 33 ಪದಕ ಗೆದ್ದಿದ್ದಾರೆ. ಈ ಮಕ್ಕಳಿಗೆ ಉತ್ತಮ ಭವಿಷ್ಯವಿದೆ ಎಂದರು.
ಅ.19ರಂದು ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಈಜು ಚಾಂಪಿಯನ್ಶಿಪ್ನಲ್ಲಿ ರಾಜ್ಯದ ಈಜುಪಟುಗಳನ್ನು ಸಿದ್ಧಪಡಿಸುತ್ತಿದ್ದೇವೆ. ಈ ಮೂಲಕ ನಾವು ಹೆಚ್ಚಿನ ಪದಕಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದೇವೆ ಎಂದು ಇದೇ ವೇಳೆ ನಿಹಾರ್ ಅಮೀನ್ ಹೇಳಿದರು.